ನವದೆಹಲಿ: ಹೊಸ ಸರ್ಕಾರದಲ್ಲಿ ನನಗೆ ಯಾವುದೇ ಜವಾಬ್ದಾರಿಯನ್ನು ನೀಡಬೇಡಿ. ಕಳೆದ 18 ತಿಂಗಳಿನಿಂದ ನಾನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರ ಸಹಾಯದಿಂದ ಸುಧಾರಿಸಿಕೊಳ್ಳುತ್ತಿದ್ದೇನೆ ಎಂದು ಅರುಣ್ ಜೇಟ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ನರೇಂದ್ರ ಮೋದಿ ಗುರುವಾರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಸಂಪುಟ ಸಚಿವರ ಪಟ್ಟಿ ಸಿದ್ಧವಾಗುತ್ತಿದೆ.
ನಾನು ಮುಂದಿನ ದಿನಗಳಲ್ಲಿಜವಾಬ್ದಾರಿಯಿಂದ ದೂರ ಉಳಿಯಲಿದ್ದೇನೆ. ನನ್ನ ಆರೋಗ್ಯ ಮತ್ತು ಚಿಕಿತ್ಸೆ ಕಡೆ ಗಮನ ಹರಿಸುವುದಕ್ಕೆ ಇದು ಸಹಾಯವಾಗಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಪತ್ರದಲ್ಲಿ ಬರೆದಿದ್ದಾರೆ.
ಆದಾಗ್ಯೂ, ಸರ್ಕಾರದ ಕೆಲಸ ಮತ್ತು ಪಕ್ಷದ ಕೆಲಸ ಏನಿದ್ದರೂ ತಾನು ಅನೌಪಚಾರಿಕವಾಗಿ ನಿರ್ವಹಿಸುವೆ ಎಂದಿದ್ದಾರೆ ಜೇಟ್ಲಿ.
ಅರುಣ್ ಜೇಟ್ಲಿ ಹಿಂದೆ ಸರಿದಿರುವುದರಿಂದ ಈ ಬಾರಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ವಿತ್ತ ಸಚಿವರಾಗಿ ಹೊಸ ವ್ಯಕ್ತಿಯನ್ನು ನೇಮಕ ಮಾಡುವ ಜವಾಬ್ದಾರಿ ಬಿಜೆಪಿಗೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.