ADVERTISEMENT

ಕೇಂದ್ರದ ವಿರುದ್ಧ ಕೇರಳ ಸರ್ಕಾರದ ಗೊತ್ತುವಳಿಗೆ ಅಂಗೀಕಾರ

ಪಿಟಿಐ
Published 2 ಫೆಬ್ರುವರಿ 2024, 14:23 IST
Last Updated 2 ಫೆಬ್ರುವರಿ 2024, 14:23 IST
..
..   

ತಿರುವನಂತಪುರ: ರಾಜ್ಯವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಮೂಲಕ ಸಹಕಾರ ತತ್ವವನ್ನು ನಾಶ ಮಾಡಲಾಗಿದೆ ಎಂದು ಆರೋಪಿಸಿ ಕೇರಳ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಗುರುವಾರ ಗೊತ್ತುವಳಿಯನ್ನು ‌ಅಂಗೀಕರಿಸಿದೆ.

ಸದನದಲ್ಲಿ ವಿರೋಧ ಪಕ್ಷದ ಗೈರುಹಾಜರಿಯ ನಡುವೆಯೂ, ಗೊತ್ತುವಳಿಯು ಸರ್ವಾನುಮತದಿಂದ ಅಂಗೀಕಾರಗೊಂಡಿದೆ ಎಂದು ಸ್ಪೀಕರ್ ಎ.ಎನ್‌ ಶಮ್ಶೀರ್‌ ಘೋಷಣೆ ಮಾಡಿದ್ದಾರೆ. 

ಗೊತ್ತುವಳಿಯನ್ನು ಮಂಡಿಸಿದ ಹಣಕಾಸು ಸಚಿವ ಕೆ.ಎನ್‌ ಗೋಪಾಲ್‌ ಅವರು, ‘ ಹಣಕಾಸು ಆಯೋಗದ ಸಲಹೆಗಳನ್ನು ನಿರಾಕರಿಸಿರುವ ಕೇಂದ್ರವು ಕೇರಳದ ಖರೀದಿ ಮಿತಿಯನ್ನು ಕಡಿಮೆಗೊಳಿಸಿದೆ ಮತ್ತು ಕಂದಾಯ ಕೊರತೆ ಅನುದಾನಕ್ಕೆ ಕತ್ತರಿ ಹಾಕಿದೆ’ ಎಂದು ಆರೋಪಿಸಿದರು.

ADVERTISEMENT

'ಕೇಂದ್ರ ಸರ್ಕಾರದ ಚಟುವಟಿಕೆಗಳು ದೇಶದ ಸಹಕಾರಿ ತತ್ವಕ್ಕೆ ಗಾಸಿಗೊಳಿಸುತ್ತಿವೆ. ಕೆಲವೊಂದು ವಿಚಾರಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ಇದೆ. ಹಾಗೆಯೇ ಸಂವಿಧಾನವು ರಾಜ್ಯಗಳಿಗೂ ಕೆಲವೊಂದು ವಿಚಾರಗಳಲ್ಲಿ ಸಂಪೂರ್ಣ ಅಧಿಕಾರವನ್ನು ನೀಡಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.