ADVERTISEMENT

Wayanad landslide| ಕ್ಲೈಮ್ ಮೊತ್ತ ತ್ವರಿತವಾಗಿ ನೀಡಿ: ವಿಮಾ ಕಂಪನಿಗಳಿಗೆ ಸೂಚನೆ

ಪಿಟಿಐ
Published 3 ಆಗಸ್ಟ್ 2024, 13:37 IST
Last Updated 3 ಆಗಸ್ಟ್ 2024, 13:37 IST
<div class="paragraphs"><p>ವಯನಾಡ್&nbsp; ಭೂಕುಸಿತ</p></div>

ವಯನಾಡ್  ಭೂಕುಸಿತ

   

ನವದೆಹಲಿ: ವಯನಾಡ್ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಕ್ಲೈಮ್ ಮೊತ್ತವನ್ನು ತ್ವರಿತವಾಗಿ ನೀಡುವಂತೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸೇರಿದಂತೆ ಸಾರ್ವಜನಿಕ ವಲಯದ ವಿಮಾ ಕಂಪನಿಗಳಿಗೆ ಹಣಕಾಸು ಸಚಿವಾಲಯ ಶನಿವಾರ ಸೂಚನೆ ನೀಡಿದೆ.

ವಯನಾಡ್, ಪಾಲಕ್ಕಾಡ್, ಕೋಯಿಕ್ಕೋಡ್‌, ಮಲಪ್ಪುರಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಸಹಾಯಕ್ಕಾಗಿ ಸಂಪರ್ಕ ವಿವರಗಳನ್ನು ಒದಗಿಸಲು ವಿಮಾ ಕಂಪನಿಗಳು ತಮ್ಮ ಪಾಲಿಸಿದಾರರನ್ನು ವಿವಿಧ ಮಾರ್ಗಗಳ ಮೂಲಕ (ಸ್ಥಳೀಯ ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು, ಕಂಪನಿ ವೆಬ್‌ಸೈಟ್‌ಗಳು, ಎಸ್‌ಎಂಎಸ್, ಇತ್ಯಾದಿ) ಸಂಪರ್ಕಿಸಲು ಪ್ರಯತ್ನಿಸುತ್ತಿವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ವಿಮೆಯನ್ನು ಕ್ಲೈಮ್‌ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಹಣಕಾಸು ಸಚಿವಾಲಯವು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ADVERTISEMENT

ಎಲ್ಐಸಿ, ನ್ಯಾಷನಲ್ ಇನ್ಶುರೆನ್ಸ್ ಕಾರ್ಪೊರೇಷನ್, ನ್ಯೂ ಇಂಡಿಯಾ ಅಶ್ಯೂರೆನ್ಸ್, ಓರಿಯಂಟಲ್ ಇನ್ಶುರೆನ್ಸ್ ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಸೇರಿದಂತೆ ಸಾರ್ವಜನಿಕ ವಲಯದ ವಿಮಾ ಕಂಪನಿಗಳು(ಪಿಎಸ್ಐಸಿ) ಎಲ್ಲಾ ಸಂಭಾವ್ಯ ಬೆಂಬಲವನ್ನು ನೀಡುವುದು ಕಡ್ಡಾಯ. ಸಂತ್ರಸ್ತರಿಗೆ ವಿಮಾ ಹಕ್ಕುಗಳನ್ನು ತ್ವರಿತವಾಗಿ ನೀಡಬೇಕು ಎಂದು ಸಚಿವಾಲಯ ಹೇಳಿದೆ.

ಸಂತ್ರಸ್ತರಿಗೆ ಅಗತ್ಯ ಬೆಂಬಲ ನೀಡಲು ಕೇಂದ್ರ ಸರ್ಕಾರ ಮತ್ತು ಹಣಕಾಸು ಸಚಿವಾಲಯ ಬದ್ಧವಾಗಿದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಅಡಿಯಲ್ಲಿ ಪಾಲಿಸಿದಾರರಿಗೆ ಸಂಬಂಧಿಸಿದಂತೆ ಕ್ಲೈಮ್ ಮೊತ್ತವನ್ನು ತ್ವರಿತವಾಗಿ ವಿತರಿಸಲು ಎಲ್‌ಐಸಿಗೆ ತಿಳಿಸಲಾಗಿದೆ. ಅಲ್ಲದೇ ಕ್ಲೈಮ್ ಮೊತ್ತದ ತ್ವರಿತ ವಿತರಣೆಗಾಗಿ ಪ್ರಕ್ರಿಯೆಗೆ ಅಗತ್ಯವಾದ ದಾಖಲಾತಿ ಸಲ್ಲಿಕೆಯನ್ನೂ ಸಡಿಲಿಸಲಾಗಿದೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.