ADVERTISEMENT

ಅನುಮತಿ ಇಲ್ಲದೆ ಮೇಲ್ಸೇತುವೆ ಉದ್ಘಾಟನೆ: ಆದಿತ್ಯ ಠಾಕ್ರೆ ವಿರುದ್ಧ ಎಫ್‌ಐಆರ್

ಏಜೆನ್ಸೀಸ್
Published 18 ನವೆಂಬರ್ 2023, 4:41 IST
Last Updated 18 ನವೆಂಬರ್ 2023, 4:41 IST
<div class="paragraphs"><p>ಆದಿತ್ಯ ಠಾಕ್ರೆ</p></div>

ಆದಿತ್ಯ ಠಾಕ್ರೆ

   

ಮುಂಬೈ: ನಗರದ ಲೋವರ್‌ ಪರೆಲ್‌ನಲ್ಲಿರುವ ಡೆಲಿಸ್ಲೆ ಮೇಲ್ಸೇತುವೆಯನ್ನು ಅಧಿಕಾರಿಗಳ ಅನುಮತಿ ಇಲ್ಲದೆ ಉದ್ಘಾಟಿಸಿದ ಆರೋಪದ ಮೇಲೆ ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ನಾಯಕ ಆದಿತ್ಯ ಠಾಕ್ರೆ, ಸುನಿಲ್‌ ಶಿಂದೆ ಹಾಗೂ ಸಚಿನ್‌ ಅಹಿರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬೃಹನ್‌ ಮುಂಬೈ ಮಹಾನಗರ ಪಾಲಿಗೆ (ಬಿಎಂಸಿ) ಅಧಿಕಾರಿಗಳು ದೂರು ನೀಡಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ADVERTISEMENT

ಆದಿತ್ಯ ಠಾಕ್ರೆ ಹಾಗೂ ಇತರರು ನವೆಂಬರ್‌ 16ರಂದು ಮೇಲ್ಸೇತುವೆ ಉದ್ಘಾಟಿಸಿದ್ದಾರೆ. ಆದರೆ, ಸೇತುವೆಯ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಸಂಬಂಧ ಎನ್‌.ಎಂ.ಜೋಶಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.