ADVERTISEMENT

ಶಿವ, ಕಾಳಿ ಆಕ್ಷೇಪಾರ್ಹ ಚಿತ್ರ ಪ್ರಕಟ: ಎಫ್‌ಐಆರ್‌ ದಾಖಲು

ದಿ ವೀಕ್‌ ನಿಯತಕಾಲಿಕ ವಿರುದ್ಧ ಭುಗಿಲೆದ್ದ ಆಕ್ರೋಶ

ಪಿಟಿಐ
Published 5 ಆಗಸ್ಟ್ 2022, 16:23 IST
Last Updated 5 ಆಗಸ್ಟ್ 2022, 16:23 IST
ವಿವೇಕ್‌ ದೆಬ್ರೊಯ್‌
ವಿವೇಕ್‌ ದೆಬ್ರೊಯ್‌   

ಕಾನ್ಪುರ (ಉತ್ತರ ಪ್ರದೇಶ):ಶಿವ ಮತ್ತು ಕಾಳಿ ದೇವತೆಯಆಕ್ಷೇಪಾರ್ಹ ಚಿತ್ರ ಪ್ರಕಟಿಸಲಾಗಿದೆ ಎಂಬ ಕಾರಣಕ್ಕಾಗಿ ‘ದಿ ವೀಕ್‌’ ನಿಯತಕಾಲಿಕೆ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಹಿಂದೂ ಸಂಘಟನೆ ಕಾರ್ಯಕರ್ತರು ‘ದಿ ವೀಕ್‌’ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜುಲೈ 24ರಂದು ವಿವೇಕ್‌ ದೆಬ್ರೊಯ್‌ ಅವರ ಲೇಖನದ ಜೊತೆಯಲ್ಲಿ ಆಕ್ಷೇಪಾರ್ಹ ಎನ್ನಲಾದ ಚಿತ್ರವನ್ನು ಪ್ರಕಟಿಸಲಾಗಿತ್ತು. ಇದರ ಬೆನ್ನಲ್ಲೇ ನಿಯತಕಾಲಿಕೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಘಟಕದ ಮಾಜಿ ಉಪಾಧ್ಯಕ್ಷ ಪ್ರಕಾಶ ಶರ್ಮಾ ಗುರುವಾರ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾನ್ಪುರದ ಕೊತ್ವಾಲಿ ಪೊಲೀಸರು ನಿಯತಕಾಲಿಕೆಯ ಸಂಪಾದಕರು ಮತ್ತು ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಬಜರಂಗದಳ ಕಾರ್ಯಕರ್ತರು ನಿಯತಕಾಲಿಕೆ ಪ್ರತಿಗಳನ್ನು ಸುಟ್ಟಿದ್ದು ಸಂಪಾದಕರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಈ ಮಧ್ಯೆ ನಿಯತಕಾಲಿಕೆಯ ಅಂಕಣಕಾರರಾಗಿದ್ದ ಅರ್ಥಶಾಸ್ತ್ರಜ್ಞ ವಿವೇಕ್‌ ದೆಬ್ರೊಯ್‌ ನಿಯತಕಾಲಿಕೆಯಿಂದ ಸಂಬಂಧ ಕಡಿದುಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.