ADVERTISEMENT

ಲೈಂಗಿಕ ಕಿರುಕುಳ ಪ್ರಕರಣ: ಇಬ್ಬರು ಕಾಂಗ್ರೆಸ್‌ ನಾಯಕಿಯರ ವಿರುದ್ಧ ಎಫ್‌ಐಆರ್‌

ಪಿಟಿಐ
Published 19 ಜುಲೈ 2018, 15:29 IST
Last Updated 19 ಜುಲೈ 2018, 15:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಣಜಿ : ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಯುವತಿಯ ವಿವರಗಳನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಗೋವಾ ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷೆ ಸೇರಿದಂತೆ ಐವರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷೆ ಪ್ರತಿಮಾ ಕುಟಿನ್ಹೊ, ಉಪಾಧ್ಯಕ್ಷೆ ಸಾವಿತ್ರಿ ಕವಳೇಕರ್, ನೇತ್ರಾವಳಿ ಗ್ರಾಮ ಪಂಚಾಯಿತಿ ಉಪ ಸರಪಂಚ್‌ ಅಭಿಜಿತ್‌ ದೇಸಾಯಿ, ಸದಸ್ಯರಾದ ವಿಠ್ಠಲ ಗಾಂವಕರ್ ಹಾಗೂ ಪ್ರಕಾಶ್ ಭಗತ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ನೇತ್ರಾವಳಿ ಗ್ರಾಮದಲ್ಲಿರುವ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದ ಪ್ರತಿಮಾ ಕುಟಿನ್ಹೊ, ನಂತರ ಸಂತ್ರಸ್ತೆ ತಾಯಿ ಜೊತೆ ಇರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದರು. ಈ ಸಂಬಂಧ ಶಿವಸೇನಾದ ಗೋವಾ ಘಟಕದ ಉಪಾಧ್ಯಕ್ಷೆ ರಾಖಿ ಪ್ರಭುದೇಸಾಯಿ ನಾಯ್ಕ ದೂರು ನೀಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.