ADVERTISEMENT

ದೆಹಲಿ: ಅಮೆರಿಕ ರಾಯಭಾರಿ ಕಚೇರಿಯಲ್ಲಿ ಬೈಡೆನ್ ವಿರೋಧಿ ಪೋಸ್ಟರ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2022, 12:25 IST
Last Updated 2 ಏಪ್ರಿಲ್ 2022, 12:25 IST
ಟ್ವಿಟರ್ ಚಿತ್ರ
ಟ್ವಿಟರ್ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಹೊರಗಡೆ ಇರುವ ನಾಮಫಲಕದಲ್ಲಿ ಕಿಡಿಗೇಡಿಗಳು ಅಮೆರಿಕ ವಿರೋಧಿ ಭಿತ್ತಿಪತ್ರವನ್ನು ಅಂಟಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ದೆಹಲಿ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಹಿಂದೂ ಸೇನಾ ಎಂಬ ಸಂಘಟನೆಯು ಇದರ ಹೊಣೆ ಹೊತ್ತುಕೊಂಡಿದ್ದು, ಭಾರತಕ್ಕೆ ಬೆದರಿಕೆ ಒಡ್ಡುವ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.

ADVERTISEMENT

ಇದನ್ನೂ ಓದಿ:

ಭಿತ್ತಿಪತ್ರದಲ್ಲಿ ವಿಶ್ವಾಸಕ್ಕೆ ಯೋಗ್ಯವಲ್ಲದ ಬೈಡೆನ್ ಆಡಳಿತ ಭಾರತವನ್ನು ಬೆದರಿಸುವುದನ್ನು ನಿಲ್ಲಿಸಿ! ನಮಗೆ ನಿಮ್ಮ ಅಗತ್ಯವಿಲ್ಲ. ಅಮೆರಿಕಕ್ಕೆ ಚೀನಾ ವಿರುದ್ಧ ಹೋರಾಡಲು ಭಾರತ ಬೇಕು. ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ನಾವು ಹೆಮ್ಮೆಪಟ್ಟುಕೊಳ್ಳುತ್ತೇವೆ ಎಂದು ಬರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.