ಮುಂಬೈ: ಲೈಂಗಿಕ ಪ್ರಚೋದನಾತ್ಮಕ ವಿಡಿಯೊ ಪ್ರಸಾರ ಮಾಡಿದ್ದ ಆರೋಪದಡಿ ಇಲ್ಲಿನ ಪ್ರಾದೇಶಿಕ ಸುದ್ದಿ ಚಾನಲ್‌ನ ಪ್ರಧಾನ ಸಂಪಾದಕ ಮತ್ತು ಮಾಧ್ಯಮ ಪ್ರತಿನಿಧಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.
ಕಿರಿಟ್ ಸೋಮೈಯ ಕುರಿತ ತಿರುಚಲಾದ ವಿಡಿಯೊ ಪ್ರಕರಣದ ಸಂಬಂಧ ‘ಲೋಕಶಾಹಿ’ ಸುದ್ದಿ ಚಾನಲ್‌ನ ಪ್ರಧಾನ ಸಂಪಾದಕ ಕಮಲೇಶ್ ಸುತಾರ್ ಮತ್ತು ಮಾಧ್ಯಮ ಪ್ರತಿನಿಧಿ ಅನಿಲ್ ತಟ್ಟೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಬಿಜೆಪಿ ನಾಯಕ, ಮಾಜಿ ಸಂಸದ ಸೋಮೈಯ ಅವರು ಈ ಕುರಿತು ದೂರು ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ತನಿಖೆಗೆ ಪೂರ್ಣ ಸಹಕಾರ ನೀಡುತ್ತೇವೆ. ಆದರೆ, ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲ’ ಎಂದು ಸುತಾರ್ ಪ್ರತಿಕ್ರಿಯಿಸಿದ್ದಾರೆ.
ಇಬ್ಬರ ವಿರುದ್ಧ ಭಾರತೀಯ ಅಪರಾಧ ಸಂಹಿತೆಯ ಸೆಕ್ಷನ್ 500 (ಮಾನಹಾನಿ), ಸೆಕ್ಷನ್ 66ಇ (ಖಾಸಗೀತನದ ಉಲ್ಲಂಘನೆ), ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ 67ಎ (ಲೈಂಗಿಕ ಪ್ರಚೋದನಾತ್ಮಕ ಅಡಕಗಳ ಪ್ರಸಾರ) ಅನ್ವಯ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.