ಶ್ರೀನಗರ: ಹಜ್ ಯಾತ್ರೆಗೆ ಹೊರಟಿರುವ ಜಮ್ಮು ಮತ್ತು ಕಾಶ್ಮೀರದ 600ಕ್ಕೂ ಹೆಚ್ಚಿನ ಯಾತ್ರಾರ್ಥಿಗಳ ಮೊದಲ ತಂಡವು ಗುರುವಾರ ಸೌದಿ ಅರೇಬಿಯಾಗೆ ತೆರಳಿದೆ.
ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ 7,000ಕ್ಕೂ ಅಧಿಕ ಯಾತ್ರಾರ್ಥಿಗಳು ಹಜ್ ಯಾತ್ರೆಗೆ ನೋಂದಾಯಿಸಿಕೊಂಡಿದ್ದು, 642 ಯಾತ್ರಾರ್ಥಿಗಳಿದ್ದ ಮೊದಲ ತಂಡವು 2 ವಿಮಾನಗಳಲ್ಲಿ ಸೌದಿ ಅರೇಬಿಯಾಗೆ ತೆರಳಿದೆ. ಯಾತ್ರೆಯು 40 ದಿನಗಳ ಅವಧಿಯದ್ದಾಗಿದ್ದು, ಮೆಕ್ಕಾ ಮತ್ತು ಮದೀನಾದಲ್ಲಿನ ಮುಸ್ಲಿಮರ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಯಾತ್ರಿಕರು ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಜ್ ಯಾತ್ರೆಯು ಇಸ್ಲಾಂ ಧರ್ಮದ 5 ಪ್ರಮುಖ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದು, ಜಗತ್ತಿನಾದ್ಯಂತ ಮುಸ್ಲಿಮರು ವಾರ್ಷಿಕವಾಗಿ ಈ ಯಾತ್ರೆಯನ್ನು ಕೈಗೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.