ADVERTISEMENT

ಛತ್ತೀಸ್‌ಗಡದ ಪ್ರಥಮ ಮುಖ್ಯಮಂತ್ರಿ ಅಜಿತ್ ಜೋಗಿ ನಿಧನ

​ಪ್ರಜಾವಾಣಿ ವಾರ್ತೆ
Published 29 ಮೇ 2020, 11:34 IST
Last Updated 29 ಮೇ 2020, 11:34 IST
Ajit Jogi
Ajit Jogi   

ನವದೆಹಲಿ:ಛತ್ತೀಸ್‌ಗಡದ ಪ್ರಥಮ ಮುಖ್ಯಮಂತ್ರಿ ಅಜಿತ್ ಜೋಗಿ ನಿಧನರಾಗಿದ್ದಾರೆ. ಎರಡು ಬಾರಿ ಹೃದಯ ಸ್ತಂಭನಕ್ಕೊಳಗಾಗಿದ್ದ ಅವರು 22 ದಿನಗಳ ಹಿಂದೆ ರಾಯ್ಪುರ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಶುಕ್ರವಾರ ಸಂಜೆ 3.30ಕ್ಕೆ ಕೊನೆಯುಸಿರೆಳಿದಿದ್ದಾರೆ.

ಎರಡು ಬಾರಿ ಅವರಿಗೆ ಹೃದಯಸ್ತಂಭನವಾಗಿದೆ.ಕಳೆದ ಎರಡು ಗಂಟೆಯಿಂದ ನಾವು ಅವರ ಹೃದಯದ ಚಟುವಟಿಕೆಯನ್ನು ಸರಿಮಾಡಲು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ ಎಂದು ರಾಯ್ಪುರ್‌ನ ಶ್ರೀನಾರಾಯಣ ಆಸ್ಪತ್ರೆಯ ವೈದ್ಯ ಸುನಿಲ್ ಖೇಮ್ಕಾ ಹೇಳಿದ್ದಾರೆ.

ಮೇ.9ರಂದು ಹೃದಯಸ್ತಂಭನಕ್ಕೊಳಗಾದ ಜೋಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್‌ನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ADVERTISEMENT

ಜೋಗಿ ಅವರು ಪತ್ನಿ ರೇಣು ಜೋಗಿ (ಶಾಸಕಿ) ಮತ್ತು ಪುತ್ರ ಅಮಿತ್ ಜೋಗಿ ಅವರನ್ನು ಅಗಲಿದ್ದಾರೆ.

20 ವರ್ಷದ ಛತ್ತೀಸ್‌ಗಡ ಇವತ್ತು ನನ್ನಂತೆಯೇ ನಷ್ಟ ಆಗಿದೆ ಎಂದು ಅಮಿತ್ ಜೋಗಿ ಅಪ್ಪನ ನಿಧನ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ.

ಛತ್ತೀಸ್‌ಗಡ ರಾಜ್ಯ ರೂಪೀಕರಣ ಆದಾಗ ನವೆಂಬರ್ 2000 ದಿಂದ ನವೆಂಬರ್ 2003ರ ವರೆಗೆ ಕಾಂಗ್ರೆಸ್ ನೇತೃತ್ವದಲ್ಲಿ ಜೋಗಿ ಮುಖ್ಯಮಂತ್ರಿ ಆಗಿದ್ದರು.2016ರಲ್ಲಿ ಕಾಂಗ್ರೆಸ್ ತೊರೆದ ಅವರು ಜನತಾ ಕಾಂಗ್ರೆಸ್ ಛತ್ತೀಸ್‌ಗಡ (ಜೆ) ಎಂಬ ಪಕ್ಷ ಆರಂಭಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.