ನವದೆಹಲಿ: ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಬುಧವಾರ ಹೊಡೆದು ಉರುಳಿಸಿದ ಪಾಕ್ ವಾಯುಪಡೆಯ ಎಫ್–16 ಅವಶೇಷಗಳ ಮೊದಲ ಚಿತ್ರವನ್ನು ಎಎನ್‌ಐ ಸುದ್ದಿಸಂಸ್ಥೆ ಗುರುವಾರ ಟ್ವಿಟ್ ಮಾಡಿದೆ. ಚಿತ್ರದಲ್ಲಿಪಾಕ್ ಮಿಲಿಟರಿ ಅಧಿಕಾರಿಗಳು ನೆಲದ ಮೇಲೆ ಬಿದ್ದಿರುವ ಎಂಜಿನ್ ಪರಿಶೀಲಿಸುತ್ತಿರುವ ದೃಶ್ಯ ಸೆರೆಯಾಗಿದೆ.
ಪಾಕ್ ಸೇನೆಯ ಉತ್ತರ ಲೈಟ್ ಇನ್ಫೆಂಟ್ರಿಯ ಕಮಾಂಡಿಂಗ್ ಅಧಿಕಾರಿಯು ಇತರ ಉನ್ನತ ಅಧಿಕಾರಿಗಳೊಂದಿಗೆ ವಿಮಾನದ ಅವಶೇಷ ಪರಿಶೀಲಿಸುತ್ತಿದ್ದಾರೆ. ಗಡಿದಾಟಿ ಬಂದು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಯತ್ನಿಸಿದಪಾಕ್ ಯುದ್ಧವಿಮಾನವನ್ನು ಭಾರತೀಯ ವಾಯುಪಡೆಯ ವಿಮಾನಗಳು ಹೊಡೆದುರುಳಿಸಿದ್ದವು.
ನವದೆಹಲಿಯಲ್ಲಿ ಬುಧವಾರ ಘಟನೆ ಕುರಿತು ವಿವರಿಸಿದ್ದ ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರೆ ರವೀಶ್‌ಕುಮಾರ್,‘ಭಾರತೀಯ ಯೋಧರು ನೋಡುತ್ತಿರುವಂತೆಯೇ ಎಫ್–16 ಜೆಟ್ ಗಡಿ ನಿಯಂತ್ರಣ ರೇಖೆಯ ಪಾಕ್ ಭಾಗದಲ್ಲಿ ಉರುಳಿಬಿತ್ತು’ ಎಂದು ಹೇಳಿದ್ದರು. ಈ ಹೋರಾಟದಲ್ಲಿ ಭಾರತೀಯ ವಾಯುಪಡೆಯು ಒಂದು ಮಿಗ್–21 ಯುದ್ಧವಿಮಾನವನ್ನು ಕಳೆದುಕೊಂಡಿತು. ಓರ್ವ ಪೈಲಟ್ ಪಾಕ್ ಸೇನೆಯಬಂಧನದಲ್ಲಿ ಸಿಲುಕಿದರು. ಬಂಧಿತ ಪೈಲಟ್ ರಕ್ಷಣೆಗೆ ಕ್ರಮ ಕೈಗೊಳ್ಳಿ, ಅವರನ್ನು ಸುರಕ್ಷಿತವಾಗಿ ದೇಶಕ್ಕೆ ವಾಪಸ್ ಕಳಿಸಿ’ ಎಂದು ಭಾರತ ಒತ್ತಾಯಿಸಿತ್ತು.
ಭಾರತೀಯ ವಾಯುಪಡೆಯು ತನ್ನ ಎಫ್–16 ಯುದ್ಧವಿಮಾನ ಹೊಡೆದುರುಳಿಸಿರುವ ಕುರಿತು ಪಾಕಿಸ್ತಾನ ಈವರೆಗೆ ಏನನ್ನೂ ಹೇಳಿಲ್ಲ. ಆದರೆ ಗಡಿ ನಿಯಂತ್ರಣ ರೇಖೆಯ ತನ್ನ ವಲಯದಲ್ಲಿಎರಡು ಭಾರತೀಯ ಯುದ್ಧವಿಮಾನಗಳನ್ನು ಹೊಡೆದು ಹಾಕಲಾಗಿದೆಎಂದು ಹೇಳಿತ್ತು.
ಇನ್ನಷ್ಟು ಓದು
* ನೀವು ನಿದ್ರೆ ಮಾಡ್ತೀರೋ ಇಲ್ವೋ; ಅಭಿನಂದನ್ ಅವರನ್ನು ಕರೆತನ್ನಿ: ನಟಿ ರಮ್ಯಾ
*ಭಾರತದ ಉರಿ ವಲಯದ ಮೇಲೆ ಪಾಕಿಸ್ತಾನದ ಶೆಲ್ ದಾಳಿ
*ಗಡಿದಾಟಿದ ಪಾಕ್ ಯುದ್ಧ ವಿಮಾನಗಳು; ಭಾರತದ ಸೇನಾ ವಲಯದ ಮೇಲೆ ಬಾಂಬ್ ದಾಳಿ
*ಜಮ್ಮು–ಕಾಶ್ಮೀರದಲ್ಲಿ ಭಾರತೀಯ ವಾಯುಪಡೆಯ ಮಿಗ್ ವಿಮಾನ ಪತನ; ಇಬ್ಬರು ಪೈಲಟ್ ಸಾವು
*ಶ್ರೀನಗರ ಸೇರಿ ಐದು ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನ ಸಂಚಾರಕ್ಕೆ ನಿರ್ಬಂಧ
*ಬಲಾಕೋಟ್‍ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್‍ಗೆ ಪ್ರತ್ಯುತ್ತರ ನೀಡಿದ ಭಾರತ
*ವೈಮಾನಿಕ ದಾಳಿಯಲ್ಲಿ ಹತರಾಗಿದ್ದು 200 ಉಗ್ರರು!
*ಪಾಕ್ ವಿರುದ್ಧ ವೈಮಾನಿಕ ದಾಳಿ ನಡೆಸಿದ ಐಎಎಫ್‍ಗೆ ಟ್ವೀಟ್ ಪ್ರಶಂಸೆ
*ಪಾಕ್ ಉಗ್ರರ ನೆಲೆಗಳ ಮೇಲೆ ದಾಳಿ: ಸೀಬರ್ಡ್ ನೌಕಾನೆಲೆಯಲ್ಲಿ ಭದ್ರತೆ ಹೆಚ್ಚಳ
*ಇಂದಿನ ದಾಳಿ ನವ ಭಾರತದ ಸಂಕಲ್ಪದ ಮುನ್ನುಡಿ: ಅಮಿತ್ ಶಾ
*ಪಾಕಿಸ್ತಾನ ಇನ್ನಾದರೂ ತೆಪ್ಪಗಿರಲಿ: ಪ್ರಹ್ಲಾದ ಜೋಶಿ
*ಮೋದಿ ನುಡಿದಂತೆ ನಡೆದಿದ್ದಾರೆ; ಇದು ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ -ಸದಾನಂದ ಗೌಡ
*ಉಗ್ರರ ಶಿಬಿರಗಳನ್ನೇ ಗುರಿಯಾಗಿರಿಸಿ ಕಾರ್ಯಾಚರಣೆ ಮಾಡಲಾಗಿದೆ: ವಿಜಯ್ ಗೋಖಲೆ
*ಪುಲ್ವಾಮಾ ದಾಳಿಗೆ ಪ್ರತೀಕಾರ: ಉಗ್ರರ ವಿರುದ್ಧ ಭಾರತ ‘ಯುದ್ಧ’
*ನಮ್ಮ ಸರ್ಕಾರ ಬಳಸುತ್ತಿರುವ ‘ನಾನ್–ಮಿಲಿಟರಿ ಆಕ್ಷನ್’ ಪದಗಳ ಅರ್ಥವೇನು
*ಸಾರ್ವತ್ರಿಕ ಚುನಾವಣೆ ಗಮನದಲ್ಲಿರಿಸಿ ವಾಯುದಾಳಿ ನಡೆಸಿದ ಭಾರತ: ಪಾಕಿಸ್ತಾನ ಆರೋಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.