ನವದೆಹಲಿ: ಕಾಶ್ಮೀರದ ಬುದ್‌ಗಾವ್ ಜಿಲ್ಲೆಯಲ್ಲಿ ವಾಯುಪಡೆಯ ಎಂಐ–17 ಹೆಲಿಕಾಪ್ಟರ್ಧರೆಗುರುಳಿದ ಹಿನ್ನೆಲೆಯಲ್ಲಿಶ್ರೀನಗರ, ಜಮ್ಮು,ಲೇಹ್, ಚಂಡಿಗಡ ಮತ್ತು ಅಮೃತಸರ ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನ ಸಂಚಾರವನ್ನು ಬುಧವಾರಕೇಂದ್ರ ಸರ್ಕಾರನಿರ್ಬಂಧಿಸಿದೆ.
ಪಾಕಿಸ್ತಾನದಲ್ಲಿದ್ದ ಉಗ್ರಗಾಮಿ ನೆಲೆಗಳ ಮೇಲೆ ಮಂಗಳವಾರ ಭಾರತೀಯ ವಾಯುಪಡೆಯ ವಿಮಾನಗಳ ಮಿಂಚಿನ ದಾಳಿ ನಡೆಸಿದ ನಂತರ ಎರಡೂ ದೇಶಗಳ ಸಂಬಂಧ ಹಳಸಿತ್ತು. ಬುಧವಾರ ಮುಂಜಾನೆಯಿಂದ ಪಾಕ್ ಸೇನಾಪಡೆಗಳು ಭಾರತೀಯ ಗಡಿ ಠಾಣೆಗಳ ಮೇಲೆ ದಾಳಿ ಆರಂಭಿಸಿದ್ದವು.
‘ತುರ್ತುಪರಿಸ್ಥಿತಿಯ ಕಾರಣ ವಿಮಾನ ಸಂಚಾರವನ್ನು ನಿರ್ಬಂಧಿಸಲಾಗಿದೆ’ ಎಂದು ಶ್ರೀನಗರದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ. ‘ತುರ್ತುಪರಿಸ್ಥಿತಿಯ ಸ್ವರೂಪ ಏನು’ ಎನ್ನುವ ಪ್ರಶ್ನೆಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲಿಲ್ಲ. ಆದರೆ ಬುದ್‌ಗಾವ್ ದುರಂತದ ಹಿನ್ನೆಲೆಯಲ್ಲಿ ಅಧಿಕಾರಿಗಳುಈ ಕ್ರಮ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಮಾನ ಸಂಚಾರ ನಿಯಂತ್ರಕರು ನಾಗರಿಕ ವಿಮಾನಗಳ ಸಂಚಾರ ನಿರ್ಬಂಧಿಸಲು ಸೂಚನೆ ನೀಡಿದ್ದರು. ಜಮ್ಮು, ಲೇಹ್ ಮತ್ತು ಶ್ರೀನಗರ ವಿಮಾನ ನಿಲ್ದಾಣಗಳಿಗೆ ಬರುತ್ತಿದ್ದ ವಿಮಾನಗಳನ್ನು ಅವುಗಳು ಹೊರಟ ನಿಲ್ದಾಣಗಳಿಗೆ ವಾಪಸ್ ಕಳಿಸಲಾಯಿತು ಎಂದು ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.