ADVERTISEMENT

ತಮಿಳುನಾಡಿನಲ್ಲಿ ಮತ್ತೆ ಪಟಾಕಿ ಕಾರ್ಖಾನೆ ಸ್ಫೋಟ; 5 ಸಾವು

ಪಿಟಿಐ
Published 25 ಫೆಬ್ರುವರಿ 2021, 14:19 IST
Last Updated 25 ಫೆಬ್ರುವರಿ 2021, 14:19 IST
ಸತ್ತೂರಿನಲ್ಲಿ ಸಂಭವಿಸಿದ ಪಟಾಕಿ ಕಾರ್ಖಾನೆ ಸ್ಫೋಟ (ಸಂಗ್ರಹ ಚಿತ್ರ)
ಸತ್ತೂರಿನಲ್ಲಿ ಸಂಭವಿಸಿದ ಪಟಾಕಿ ಕಾರ್ಖಾನೆ ಸ್ಫೋಟ (ಸಂಗ್ರಹ ಚಿತ್ರ)   

ವಿರುಧುನಗರ (ತಮಿಳುನಾಡು): ಜಿಲ್ಲೆಯ ಶಿವಕಾಶಿ ಬಳಿ ಪಟಾಕಿ ಕಾರ್ಖಾನೆಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಐವರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಟಾಕಿ ತಯಾರಿಕೆಗಾಗಿ ಸಂಗ್ರಹಿಸಿದ್ದ 10ಕ್ಕೂ ಹೆಚ್ಚು ಶೆಡ್‌ಗಳು ಬೆಂಕಿಗೆ ಆಹುತಿಯಾಗಿದೆ.

ಕಳೆದೊಂದು ತಿಂಗಳಲ್ಲಿ ಈ ಪ್ರದೇಶದಲ್ಲಿ ಸಂಭವಿಸುತ್ತಿರುವ ಎರಡನೇ ದುರ್ಘಟನೆ ಇದಾಗಿದೆ. ಫೆಬ್ರುವರಿ 12ರಂದು ಸತ್ತೂರು ಬಳಿ ಅಚ್ಚಂಕುಲಂ ಘಟಕದಲ್ಲಿ ನಡೆದ ಪಟಾಕಿ ಸ್ಫೋಟದಲ್ಲಿ 20ಕ್ಕೂ ಹೆಚ್ಚು ಜನ ಕಾರ್ಮಿಕರು ಮೃತಪಟ್ಟು ಸುಮಾರು 30ರಷ್ಟು ಮಂದಿ ಗಾಯಗೊಂಡಿದ್ದರು.

ADVERTISEMENT

ಈ ಬಾರಿ ಕಾಲಾಯರ್ ಕುರಿಚಿಯಲ್ಲಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ಹಾಗೂ ರಕ್ಷಣಾ ತಂಡಗಳು ಬೆಂಕಿ ನಂದಿಸಲು ನೆರವಾದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಫೋಟದ ಹಿಂದಿನ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ಪಟಾಕಿಗಳನ್ನು ಶಿವಕಾಶಿಯಲ್ಲಿ ತಯಾರಿ ಮಾಡಲಾಗುತ್ತಿದೆ. ಆದರೆ ಪದೇ ಪದೇ ಅವಘಡ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.