ಸುಕ್ಮಾ: ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ಐವರು ನಕ್ಸಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಚಿಕೋಮೆಟ್ಟಾ ಗ್ರಾಮದ ಸಮೀಪವಿರುವ ಅರಣ್ಯದ ಬೆಟ್ಟದಲ್ಲಿ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ), ಸಿಆರ್‌ಪಿಎಫ್‌ನ 165ನೇ ಬೆಟಾಲಿಯನ್ ಹಾಗೂ ಸ್ಥಳೀಯ ಪೊಲೀಸರು ಸೋಮವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತರಲ್ಲಿ ಉಈಕಾ ಚೈತು ಮಹಾರಾಷ್ಟ್ರದ ಗಡಚಿರೋಲಿಯಲ್ಲಿ ಮಾವೋವಾದಿಗಳ ಸಮಿತಿಯ ಸಕ್ರಿಯ ಸದಸ್ಯನಾಗಿದ್ದ. ಈತನ ತಲೆಗೆ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದಿದ್ದಾರೆ.
ಆರು ಜಿಲೆಟಿನ್ ರಾಡ್‌ಗಳು, ಸ್ಫೋಟಕಗಳು, ಗನ್ ಪೌಡರ್, ಬ್ಯಾರೆಲ್ ಗ್ರೆನೇಡ್ ಲಾಂಚರ್ (ಬಿಜಿಎಲ್), ಶೆಲ್, ಕಾರ್ಡೆಕ್ಸ್ ವೈರ್, ಬ್ಯಾಟರಿಗಳು ಸೇರಿದಂತೆ ಸ್ಫೋಟಕಗಳಲ್ಲಿ ಬಳಸುವ ಇನ್ನಿತರ ವಸ್ತುಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಗಸ್ತು ತಿರುಗುವ ಭದ್ರತಾ ಸಿಬ್ಬಂದಿಯ ವಿರುದ್ಧ ದಾಳಿ ನಡೆಸಲು ನಕ್ಸಲರು ಈ ಸ್ಫೋಟಕಗಳನ್ನು ಹೊಂದಿದ್ದರು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.