ADVERTISEMENT

ಪ್ರಯಾಗ್‌ರಾಜ್‌: ಒಂದೇ ಕುಟುಂಬದ ಐವರು ಶವವಾಗಿ ಪತ್ತೆ – ಅಪರಾಧ 2.0 ಎಂದ ಅಖಿಲೇಶ್

ಪಿಟಿಐ
Published 16 ಏಪ್ರಿಲ್ 2022, 10:41 IST
Last Updated 16 ಏಪ್ರಿಲ್ 2022, 10:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರಯಾಗ್‌ರಾಜ್‌/ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಜಿಲ್ಲೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದು, ‘ಬಿಜೆಪಿ 2.0’ ಸರ್ಕಾರವು ಅಪರಾಧದಲ್ಲಿ ಮುಳುಗಿದೆ ಎಂದು ಎಸ್‌ಪಿ ನಾಯಕ ಅಖಿಲೇಶ್‌ ಯಾದವ್‌ ಟೀಕಿಸಿದ್ದಾರೆ.

ಜಿಲ್ಲೆಯ ನವಾಬ್‌ಗಂಜ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಖಗಲ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಹುಲ್‌ (42), ರಾಹುಲ್‌ ‍ಪತ್ನಿ ಪ್ರಿತಿ (38), ಪುತ್ರಿಯರಾದ ಮಹಿ (15), ಪಿಹು (13) ಮತ್ತು ಕುಹು (11) ಮೃತಪಟ್ಟವರು. ಅಖಿಲೇಶ್ ಯಾದವ್ ಟೀಕೆಗೆ ಪ್ರತಿಕ್ರಿಯಿಸಿರುವಪೊಲೀಸ್‌ ವರಿಷ್ಠಾಧಿಕಾರಿ ಅಭಿಷೇಕ್ ಅಗರವಾಲ್‌, ಕುಟುಂಬದ ಯಜಮಾನ ಇತರರನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.