ADVERTISEMENT

ಭಾರತ ಕರಾವಳಿಗೆ ಅಕ್ರಮ ಪ್ರವೇಶ: ಐವರು ಶ್ರೀಲಂಕಾ ಪ್ರಜೆಗಳು ಕಾವಲು ಪಡೆ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 9:21 IST
Last Updated 27 ಫೆಬ್ರುವರಿ 2020, 9:21 IST
ಭಾರತದ ಕರಾವಳಿಗೆ ಅಕ್ರಮ ಪ್ರವೇಶ ಐದು ಮಂದಿ ಕರಾವಳಿ ಕಾವಲುಪಡೆ ವಶಕ್ಕೆ
ಭಾರತದ ಕರಾವಳಿಗೆ ಅಕ್ರಮ ಪ್ರವೇಶ ಐದು ಮಂದಿ ಕರಾವಳಿ ಕಾವಲುಪಡೆ ವಶಕ್ಕೆ   

ರಾಮೇಶ್ವರ (ತಮಿಳುನಾಡು): ಭಾರತೀಯ ಸಮುದ್ರದಲ್ಲಿ ಅಕ್ರಮವಾಗಿ ಪ್ರವೇಶಿಸಿದ ಐದು ಮಂದಿ ಶ್ರೀಲಂಕಾ ಪ್ರಜೆಗಳನ್ನು ನೌಕಾದಳದಹೆಲಿಕಾಪ್ಟರ್ ಪತ್ತೆ ಹಚ್ಚಿ ಇಲ್ಲಿನ ಕರಾವಳಿ ಕಾವಲು ಪಡೆ ವಶಕ್ಕೆ ನೀಡಿದೆ.

ಭಾರತೀಯ ನೌಕಾದಳದಕಣ್ಗಾವಲು ಹೆಲಿಕಾಪ್ಟರ್ ಸಮುದ್ರ ತೀರದಲ್ಲಿ ಹಾರಾಟ ನಡೆಸುತ್ತಿದ್ದಾಗ ಧನುಸ್ಕೋಟಿಯ ಸಮುದ್ರ ತೀರದಅರಿಚಲ್ ಮುನೈ ಎಂಬ ಪ್ರದೇಶದಲ್ಲಿ ಯಾಂತ್ರಿಕ ದೋಣಿಯೊಂದು ಸಂಚರಿಸುತ್ತಿರುವುದು ಪತ್ತೆಯಾಗಿದೆ.

ಕೂಡಲೆ ಸ್ಥಳಕ್ಕೆ ಧಾವಿಸಿದ ನೌಕಾದಳದಅಧಿಕಾರಿಗಳು ಅಪರಿಚಿತರನ್ನು ವಿಚಾರಿಸಿದಾಗ ಇವರೆಲ್ಲಾ ಶ್ರೀಲಂಕಾ ಪ್ರಜೆಗಳಾಗಿದ್ದು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುತ್ತಿರುವುದು ಕಂಡು ಬಂತು. ಕೂಡಲೆ ಅವರನ್ನು ತಮಿಳುನಾಡಿನ ಕರಾವಳಿ ಕಾವಲು ಪಡೆಯ ವಶಕ್ಕೆ ನೀಡಿದ್ದಾರೆ. ವಿಚಾರಣೆ ನಡೆಯುತ್ತಿದೆ ಎಂದು ಎಎನ್ ಐ ವರದಿ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.