ADVERTISEMENT

Live Updates | ಉತ್ತರಾಖಂಡ ಹಿಮಪಾತ: ಎನ್‌ಟಿಪಿಸಿಯಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯ ಸ್ಥಗಿತ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗಿರುವ ಹಿನ್ನೆಲೆಯಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದ್ದು, ಪರಿಣಾಮವಾಗಿ ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 150 ಕ್ಕೂ ಹೆಚ್ಚು ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಿಸ್ಥಿತಿ ಅವಲೋಕಿಸುತ್ತಿದ್ದು, ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ.

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 21:23 IST
Last Updated 7 ಫೆಬ್ರುವರಿ 2021, 21:23 IST

ರಕ್ಷಣಾ ಕಾರ್ಯಕ್ಕೆ ವಾಯುಪಡೆಯ ನಿಯೋಜನೆ 

ರಕ್ಷಣಾ ಕಾರ್ಯಕ್ಕೆ ವಾಯುಪಡೆಯ ನಿಯೋಜನೆ 

ನೀರಿನ ಮಟ್ಟ ಏರಿಕೆ ಎನ್‌ಟಿಪಿಸಿಯಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯ ಸ್ಥಗಿತ

ಎನ್‌ಟಿಪಿಸಿಯ 900 ಮೀಟರ್ ಉದ್ದದ ಸುರಂಗದಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯವನ್ನು ನೀರಿನ ಮಟ್ಟ ಏರಿಕೆಯಿಂದಾಗಿ ಸ್ಥಗಿತಗೊಳಿಸಬೇಕಾಗಿದೆ ಎಂದು ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.
(ಪಿಐಬಿ ಮಾಹಿತಿ) 

ದುರಂತದ ಸಮಯದಲ್ಲಿ ಕಾಂಗ್ರೆಸ್ ಉತ್ತರಾಖಂಡದೊಂದಿಗೆ ನಿಲ್ಲಲಿದೆ: ಸೋನಿಯಾ ಗಾಂಧಿ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿರುವ ಹಿಮಪಾತದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಪಕ್ಷದ ಕಾರ್ಯಕರ್ತರು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಅಧಿಕಾರಿಗಳಿಗೆ ನೆರವಾಗಬೇಕು ಎಂದು ಕರೆ ನೀಡಿದ್ದಾರೆ.

ADVERTISEMENT

ಕಾಣೆಯಾದವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಐವರು ಸ್ಥಳೀಯರು ಸೇರಿದಂತೆ 180 ಕುರಿಗಳು ಮತ್ತು ಮೇಕೆಗಳೊಂದಿಗೆ ಕುರಿಗಾಹಿಗಳು ಪ್ರವಾಹದಲ್ಲಿ ಮುಳುಗಿದ್ದಾರೆ. ಪ್ರವಾಹದಲ್ಲಿ ಸುಮಾರು 125 ಜನರು ಕಾಣೆಯಾಗಿದ್ದಾರೆ ಎಂದು ನಾವು ಊಹಿಸುತ್ತಿದ್ದೇವೆ. ಈ ಸಂಖ್ಯೆಯು ಹೆಚ್ಚಾಗಬಹುದು. ವಿಕೋಪದ ಹಿಂದಿನ ಕಾರಣವನ್ನು ತಜ್ಞರಷ್ಟೇ ಹೇಳಬಹುದಾಗಿದೆ. ಆದರೆ ನಮ್ಮ ಸರ್ಕಾರ ಇದೀಗ ಜನರ ಜೀವ ಉಳಿಸುವತ್ತ ಗಮನ ಹರಿಸಿದೆ: ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್

ಮೃತರ ರಕ್ತಸಂಬಂಧಿಗಳಿಗೆ ತಲಾ ₹ 4 ಲಕ್ಷ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.

ದುರಂತ ಪೀಡಿತ ಜನರೊಂದಿಗೆ ನಾವಿದ್ದೇವೆ; ರಾಜನಾಥ್ ಸಿಂಗ್

ಹಿಮಪಾತದಿಂದಾಗಿ ಉಂಟಾದ ಹಾನಿಯ ಬಗ್ಗೆ ನಾನು ಚಮೋಲಿ ಜಿಲ್ಲೆಯಿಂದ ದೃಶ್ಯಗಳನ್ನು ನೋಡುತ್ತಿದ್ದೇನೆ. ಈ ಕಷ್ಟದ ಸಮಯದಲ್ಲಿ ದುರಂತ ಪೀಡಿತ ಜನರೊಂದಿಗೆ ನಾವು ಹೆಗಲು ಕೊಟ್ಟು ನಿಲ್ಲುತ್ತೇವೆ. ಉತ್ತರಾಖಂಡದ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಪರಿಸ್ಥಿತಿ ಅವಲೋಕಿಸಿದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್

ಯಾತ್ರಾರ್ಥಿಗಳ ರಕ್ಷಣೆಗೆ ಗುಜರಾತ್ ಸಿಎಂ ಮನವಿ

ಅಹಮದಾಬಾದ್: ಉತ್ತರಾಖಂಡದಲ್ಲಿ ಹಿಮಪಾತದ ಹಿನ್ನೆಲೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಉತ್ತರದ ರಾಜ್ಯದಲ್ಲಿ ಸಿಲುಕಿರುವ ಗುಜರಾತ್‌ನಿಂದ ತೆರಳಿದ್ದ ಯಾತ್ರಾರ್ಥಿಗಳಿಗೆ ತಕ್ಷಣದ ಸಹಾಯ ಮತ್ತು ರಕ್ಷಣೆಯನ್ನು ಖಾತ್ರಿಪಡಿಸುವಂತೆ ಭಾನುವಾರ ತಮ್ಮ ಸಹವರ್ತಿ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಕೋರಿದ್ದಾರೆ.
 

ತೀವ್ರ ಆಘಾತ: ಉತ್ತರಾಖಂಡ ದುರಂತದ ಬಗ್ಗೆ ಮಮತಾ

ಕೋಲ್ಕತಾ: ಹಿಮಪಾತದಿಂದಾಗಿ ಉತ್ತರಾಖಂಡದಲ್ಲಿ ಸಂಭವಿಸಿದ ಅನಾಹುತದ ಬಗ್ಗೆ ತೀವ್ರ ಆಘಾತಕ್ಕೊಳಗಾಗಿದ್ದೇವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಹೇಳಿದ್ದಾರೆ.
 

ಮುಖ್ಯಮಂತ್ರಿಯೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದ ಪ್ರಧಾನಿ ಮೋದಿ

ಉತ್ತರಾಖಂಡದಲ್ಲಿ ಸಂಭವಿಸಿರುವ ಅವಘಡದ ಕುರಿತು ರಾಜ್ಯದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಕೇಂದ್ರ ಗೃಹ ಸಚಿವ ಮತ್ತು ಎನ್‌ಡಿಆರ್‌ಎಫ್‌ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 

150ಕ್ಕೂ ಹೆಚ್ಚು ಜನ ಮೃತಪಟ್ಟಿರುವ ಶಂಕೆ, ಮೂವರ ಶವ ಪತ್ತೆ

ತಪೋವನ-ರೆನಿಯಲ್ಲಿನ ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 150ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ವಕ್ತಾರರು ಯೋಜನಾ-ಉಸ್ತುವಾರಿ ಹೇಳಿಕೆಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ. ಮೂರು ಮೃತದೇಹಗಳು ಸದ್ಯ ಪತ್ತೆಯಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ಕೈಗೊಳ್ಳಲಾಗಿದೆ. 

ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ಧ ಎಂದ ಕೇಜ್ರಿವಾಲ್

ನವದೆಹಲಿ: ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಭಾನುವಾರ ಹಿಮಪಾತ ಸಂಭವಿಸಿ ಭಾರಿ ಪ್ರವಾಹಕ್ಕೆ ಕಾರಣವಾಗಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಉತ್ತರಾಖಂಡದ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. 
 

ನದಿಯಿಂದ 9 ಮೃತದೇಹಗಳು ಹೊರಕ್ಕೆ

ಸುಮಾರು 100 ಕಾರ್ಮಿಕರು ಸ್ಥಳದಲ್ಲಿದ್ದರು ಎಂದು ಶಂಕಿಸಲಾಗಿದೆ. ಅದರಲ್ಲಿ 9-10 ಮೃತ ದೇಹಗಳನ್ನು ನದಿಯಿಂದ ವಶಪಡಿಸಿಕೊಳ್ಳಲಾಗಿದೆ. ಉಳಿದವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. 250 ಐಟಿಬಿಪಿ ಸಿಬ್ಬಂದಿ ಸ್ಥಳದಲ್ಲಿದ್ದಾರೆ, ಶೀಘ್ರದಲ್ಲೇ ಭಾರತೀಯ ಸೇನಾ ಪಡೆಯ ತಂಡವು ಸ್ಥಳಕ್ಕೆ ತಲುಪಲಿದೆ: ಎಸ್‌ಎಸ್ ದೇಸ್ವಾಲ್, ಐಟಿಬಿಪಿ ಡಿಜಿ

ಆಘಾತ ವ್ಯಕ್ತಪಡಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್

ರೆನಿ ಗ್ರಾಮದ ಬಳಿ ಸೇತುವೆ ಕುಸಿದ ಕಾರಣದಿಂದಾಗಿ ಕೆಲವು ಗಡಿಗಳ ಸಂಪರ್ಕವನ್ನು 'ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ' ಎಂದು ಉತ್ತರಾಖಂಡ್ ಪ್ರವಾಹದ ಬಗ್ಗೆ ಐಟಿಬಿಪಿ ವಕ್ತಾರ ತಿಳಿಸಿದ್ದಾರೆ.

ಅಗತ್ಯ ನೆರವು ನೀಡುವುದಾಗಿ ಕೇಂದ್ರ ಜಲಶಕ್ತಿ ಸಚಿವ

ಉತ್ತರಾಖಂಡ್ ಸಿಎಂ ಅವರೊಂದಿಗೆ ಮಾತನಾಡಿದ್ದು, ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ತಿಳಿಸಲಾಗಿದೆ. ಎಲ್ಲ ಬೆಳವಣಿಗೆಗಳ ಬಗ್ಗೆ ನಾವು ಗಮನ ಹರಿಸುತ್ತಿದ್ದೇವೆ ಎಂದು ಹಿಮಪಾತದ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರು ತಿಳಿಸಿದ್ದಾರೆ.

50 ರಿಂದ 100 ಸಿಬ್ಬಂದಿ ನಾಪತ್ತೆ

ಉತ್ತರಾಖಂಡದ ತಪೋವನ-ರೆನಿ ಪ್ರದೇಶದಲ್ಲಿ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಅಂದಾಜು 50-100 ಸಿಬ್ಬಂದಿ ಕಾಣೆಯಾಗಿದ್ದು, ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ ಎಂದು ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್ ಭಾನುವಾರ ಹೇಳಿದ್ದಾರೆ.

150 ಕಾರ್ಮಿಕರು ಮೃತಪಟ್ಟಿರುವ ಶಂಕೆ, ಮೂರು ಮೃತದೇಹಗಳು ಪತ್ತೆ

ತಪೋವನ ಎನ್‌ಟಿಪಿಸಿ ವಿದ್ಯುತ್ ಸ್ಥಾವರದ ಉಸ್ತುವಾರಿ ಪ್ರಕಾರ, 150 ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, 3 ಮೃತದೇಹಗಳು ಪತ್ತೆಯಾಗಿವೆ ಎಂದು ದುರಂತದ ಬಗ್ಗೆ ಐಟಿಬಿಪಿ ವಕ್ತಾರ ತಿಳಿಸಿದ್ದಾರೆ.

ಉತ್ತರಾಖಂಡದಲ್ಲಿ ಹಿಮಪ್ರವಾಹ: 150ಕ್ಕೂ ಅಧಿಕ ಜನರು ಕಣ್ಮರೆ; ಎರಡು ಮೃತದೇಹ ಪತ್ತೆ

ಉತ್ತರಾಖಂಡದಲ್ಲಿ ಹಿಮಪಾತ; ಹೈಅಲರ್ಟ್ ಘೋಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.