ರಾಂಚಿ: ಮೇವು ಹಗರಣ ಪ್ರಕರಣದಲ್ಲಿ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯವು 89 ಮಂದಿಯನ್ನು ದೋಷಿಗಳು ಎಂದು ಘೋಷಿಸಿದ್ದು, 53 ಜನರಿಗೆ ವಿವಿಧ ಪ್ರಕರಣಗಳಲ್ಲಿ ಗರಿಷ್ಠ ಮೂರು ವರ್ಷದವರೆಗೂ ಸಜೆ ವಿಧಿಸಿದೆ. ಉಳಿದವರಿಗೆ ಶಿಕ್ಷೆ ನಿರ್ಧರಿಸುವ ಬಗ್ಗೆ ಸೆಪ್ಟೆಂಬರ್ ಒಂದರಂದು ವಿಚಾರಣೆ ನಡೆಯಲಿದೆ.
ಸೋಮವಾರ ಪ್ರಕರಣದ ತೀರ್ಪು ಪ್ರಕಟಿಸಿದ ಸಿಬಿಐ ವಿಶೇಷ ನ್ಯಾಯಾಧೀಶರಾದ ವಿಶಾಲ್ ಶ್ರೀವಾತ್ಸವ್ ಅವರು, ಇತರೆ 35 ಜನರನ್ನು ಆರೋಪದಿಂದ ಖುಲಾಸೆಗೊಳಿಸಿದರು.
ಅವಿಭಜಿತ ಬಿಹಾರದ ಡೊರಾಂಡಾ ಖಜಾನೆಯಿಂದ ಒಟ್ಟು ₹ 36.59 ಕೋಟಿ ಹಿಂಪಡೆದು ವಂಚನೆ ನಡೆಸಿದ್ದ ಪ್ರಕರಣದಲ್ಲಿ ಒಟ್ಟು 124 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. 1990ರಿಂದ 1995ರ ನಡುವೆ ಈ ಹಣವನ್ನು ಖಜಾನೆಯಿಂದ ಪಡೆಯಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.