ನವದೆಹಲಿ: ದೆಹಲಿ ಜನತೆಯ ಸೇವೆಗಾಗಿ ತಮ್ಮ ಸರ್ಕಾರ ರಾಮರಾಜ್ಯ ಪರಿಕಲ್ಪನೆಯಿಂದ ಪ್ರಭಾವಿತವಾದ 10 ತತ್ವಗಳನ್ನು ಅನುಸರಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಂಡ ಬಳಿಕ ದೆಹಲಿಯ ಹಿರಿಯ ನಾಗರಿಕರನ್ನು ಅಲ್ಲಿಗೆ ದರ್ಶನಕ್ಕಾಗಿ ಕಳುಹಿಸುವುದಾಗಿಯೂ ಅವರು ತಿಳಿಸಿದರು.
ಲೆಫ್ಟಿನೆಂಟ್ ಗವರ್ನರ್ ಅವರ ಬಜೆಟ್ ಭಾಷಣಕ್ಕೆ ವಂದನೆ ಸೂಚಿಸು ಗೊತ್ತುವಳಿಯ ಮೇಲೆ ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ನಾನು ಶ್ರೀರಾಮ ಮತ್ತು ಹನಮಾನ್ ಭಕ್ತ. ರಾಮರಾಜ್ಯದಿಂದ ಪ್ರಭಾವಿತವಾದ 10 ತತ್ವಗಳನ್ನು ನಾವು ಅನುಸರಿಸುತ್ತಿದ್ದೇವೆ. ಆಹಾರ, ಶಿಕ್ಷಣ, ವೈದ್ಯಕೀಯ ಕಾಳಜಿ, ವಿದ್ಯುತ್, ನೀರು ಪೂರೈಕೆ, ಉದ್ಯೋಗ, ವಸತಿ, ಮಹಿಳಾ ಭದ್ರತೆ, ಹಿರಿಯರನ್ನು ಗೌರವಿಸುವುದು ಇದರಲ್ಲಿ ಸೇರಿದೆ’ ಎಂದರು.
ದೆಹಲಿಯ ಎಲ್ಲಾ ಶಾಸಕರು ಜನಸಾಮಾನ್ಯರಂತೆಯೇ ಆಸ್ಪತ್ರೆಗಳಿಗೆ ತೆರಳಿ, ಸರದಿಯಲ್ಲಿ ನಿಂತು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.