ADVERTISEMENT

ಒಡಿಶಾ: 40 ಗಿಳಿಗಳ ರಕ್ಷಣೆ, ಒಬ್ಬನ ಬಂಧನ

ಪಿಟಿಐ
Published 2 ಫೆಬ್ರುವರಿ 2024, 14:33 IST
Last Updated 2 ಫೆಬ್ರುವರಿ 2024, 14:33 IST
<div class="paragraphs"><p>ಗಿಳಿ ಮರಿ (ಸಾಂದರ್ಭಿಕ ಚಿತ್ರ)</p></div>

ಗಿಳಿ ಮರಿ (ಸಾಂದರ್ಭಿಕ ಚಿತ್ರ)

   

ರಾವೂರ್‌ಕೇಲಾ : ಸುಂದರ್‌ಘರ್‌ ಜಿಲ್ಲೆಯಲ್ಲಿ ವನ್ಯಜೀವಿ ಮಾರಾಟಗಾರನೊಬ್ಬನನ್ನು ಬಂಧಿಸಿ, ಆತನ ಮನೆಯಲ್ಲಿದ್ದ 40 ಗಿಳಿಗಳನ್ನು ರಕ್ಷಿಸಲಾಗಿದೆ ಎಂದು‌ ಅರಣ್ಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ನುಹಾಗಾವ್‌ ಅರಣ್ಯಪ್ರದೇಶಕ್ಕೆ ಸಮೀಪದ ಗ್ರಾಮದಲ್ಲಿರುವ ತಾಹೀರ್‌ ಅನ್ಸಾರಿ(50) ಮನೆ ಮೇಲೆ ದಾಳಿ ನಡೆಸಿ, ಬಂಧನದಲ್ಲಿಡಲಾಗಿದ್ದ ಗಿಳಿಗಳನ್ನು ರಕ್ಷಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಈ ಭಾಗದಲ್ಲಿ ವನ್ಯಜೀವಿಗಳ ವ್ಯಾಪಾರ ನಡೆಸುವ ಗುಂಪೊಂದು ಕಾರ್ಯಚರಿಸುತ್ತಿದ್ದು, ಬಂಧಿತ ಆರೋಪಿ ಅನ್ಸಾರಿ ಮನೆಯಲ್ಲಿ ಗಿಳಿ ಮರಿಗಳಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ದಾಳಿ ನಡೆಸಿ ಬಂಧಿಸಲಾಗಿದೆ’ ಎಂದು ವಿಭಾಗೀಯ ಅರಣ್ಯಾಧಿಕಾರಿ ಜಸೋಬಂತ್‌ ಸೆಥಿ ತಿಳಿಸಿದ್ದಾರೆ. 

‘ಕಳೆದ ವಾರ ಇನ್ನೊಬ್ಬ ವ್ಯಕ್ತಿ ಬಳಿ ಇದ್ದ 82 ಗಿಳಿ ಮರಿಗಳನ್ನು ರಕ್ಷಿಸಲಾಗಿತ್ತು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.