‘ಹುಲಿಗಳು ಇರುವ ಎಲ್ಲಾ ಅರಣ್ಯ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಗೆ ತರಬೇಕು’ ಎಂದು ‘ಅಮೃತ ಕಾಲದ ಹುಲಿ ಮುನ್ನೋಟ’ದ ಆಶಯದಲ್ಲಿ ವಿವರಿಸಲಾಗಿದೆ. ಹುಲಿ ಯೋಜನೆಗೆ 50 ವರ್ಷ ತುಂಬಿದ ಸಲುವಾಗಿ ಹತ್ತಾರು ಕ್ರಮಗಳನ್ನು ಒಳಗೊಂಡ ಮುನ್ನೋಟವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡಿದ್ದಾರೆ. ಮುನ್ನೋಟದ ಗುರಿಯಲ್ಲೂ ಇದನ್ನೇ ವಿವರಿಸಲಾಗಿದೆ.
ಮುನ್ನೋಟದ ಮುಖ್ಯಾಂಶಗಳು
l ಕೇಂದ್ರದ ನೆರವು ಹೆಚ್ಚಳ: ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆಗೆ ಅತ್ಯಾಧುನಿಕ ವಿಶೇಷ ವಾಹನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಒದಗಿಸಲಾಗುವುದು
l ದೇಶದ ಹುಲಿ ಧಾರಣಾ ಸಾಮರ್ಥ್ಯವನ್ನು ನಿಗದಿ ಮಾಡಲಾಗುವುದು. ಪ್ರತಿ ಆವಾಸಸ್ಥಾನದ ಹುಲಿ ಧಾರಣೆ ಸಾಮರ್ಥ್ಯಕ್ಕೆ ಮಿತಿ ಹಾಕಲಾಗುವುದು
l ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ಹುಲಿ ಸಂರಕ್ಷಣೆಯ ಸಾಧನೆಗಳನ್ನು ಬಳಸಿಕೊಳ್ಳಲಾಗುವುದು. ಇದಕ್ಕಾಗಿ ವಾಣಿಜ್ಯ ಸಚಿವಾಲಯ ಮತ್ತು ಕಾರ್ಪೊರೇಟ್ ಸಹಕಾರ ಪಡೆಯಲಾಗುವುದು
l ಪ್ರವಾಸೋದ್ಯಮ ಸಚಿವಾಲಯದ ನೆರವಿನೊಂದಿಗೆ ಪರಿಸರ ಪ್ರವಾಸಕ್ಕೆ ಉತ್ತೇಜನ
l ವನ್ಯಜೀವಿಗಳಿಗೆ ತಗಲುವ ಸೋಂಕು, ರೋಗಗಳ ನಿಯಂತ್ರಣ ಮತ್ತು ಅಧ್ಯಯನಕ್ಕೆ ಕ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.