ADVERTISEMENT

ವಿಚಾರವಾದಿ ದಾಭೋಲ್ಕರ್ ಹತ್ಯೆ: ಖುಲಾಸೆಗೊಂಡಿದ್ದ ಆರೋಪಿ, ವಕೀಲರಿಗೆ ಸನ್ಮಾನ

ಪಿಟಿಐ
Published 2 ಜುಲೈ 2024, 15:50 IST
Last Updated 2 ಜುಲೈ 2024, 15:50 IST
<div class="paragraphs"><p>ದಾಭೋಲ್ಕರ್ ಹತ್ಯೆ&nbsp;ಆರೋಪಿ</p></div>

ದಾಭೋಲ್ಕರ್ ಹತ್ಯೆ ಆರೋಪಿ

   

ಪಣಜಿ: ಗೋವಾದಲ್ಲಿ ಬಲಪಂಥೀಯ ಸಂಸ್ಥೆ ಹಿಂದೂ ಜನಜಾಗೃತಿ ಸಮಿತಿ (ಎಚ್‌ಜೆಎಸ್) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ಆರೋಪಿ ಹಾಗೂ ಆತನ ಪರ ವಕೀಲರನ್ನು ಸನ್ಮಾನ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ದಕ್ಷಿಣ ಗೋವಾದ ಪೊಂಡಾ ಪಟ್ಟಣದಲ್ಲಿ ಜೂನ್ 24ರಿಂದ ಆರಂಭವಾದ ‘ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವದ ಸಮ್ಮೇಳನ’ವು ಜೂನ್ 30ರಂದು ಅಂತ್ಯಗೊಂಡಿತು. ಈ ವೇಳೆ ದಾಭೋಲ್ಕರ್ ಹತ್ಯೆ ಪ್ರಕರಣದ ಆರೋಪಿಯಾಗಿ 2 ತಿಂಗಳ ಹಿಂದಷ್ಟೇ ಖುಲಾಸೆಗೊಂಡಿದ್ದ ವಿಕ್ರಂ ಭಾವೆ ಹಾಗೂ ಆರೋಪಿಗಳ ಪರ ವಾದ ಮಂಡಿಸಿದ್ದ ವಕೀಲರನ್ನು ಸನ್ಮಾನಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

ADVERTISEMENT

ಈ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳು, ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್  ಸೇರಿದಂತೆ ಹಲವರು ಭಾಗಿಯಾಗಿದ್ದರು ಎಂದು ಎಚ್‌ಜೆಎಸ್‌ನ ವಕ್ತಾರ ತಿಳಿಸಿದ್ದಾರೆ. 

2013ರ ಆಗಸ್ಟ್ 20ರಂದು ಪುಣೆಯ ಓಂಕಾರೇಶ್ವರ ದೇವಸ್ಥಾನದ ಬಳಿ ಇರುವ ಮೇಲ್ಸೇತುವೆ ಮೇಲೆ ಬೆಳಗಿನ ವಾಯುವಿಹಾರ ಮಾಡುತ್ತಿದ್ದ ವಿಚಾರವಾದಿ ದಾಭೋಲ್ಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.