ನವದೆಹಲಿ: ಬಿಜೆಪಿ ಹಿರಿಯ ನಾಯಕ ಮತ್ತು ಮೂರು ಬಾರಿ ಶಾಸಕರಾಗಿದ್ದ ಬ್ರಹ್ಮ್ ಸಿಂಗ್ ತಂವರ್ ಅವರು ಗುರುವಾರ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ)ಗೆ ಸೇರ್ಪಡೆಯಾಗಿದ್ದಾರೆ.
ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಇಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಬ್ರಹ್ಮ್ ಸಿಂಗ್ ಮತ್ತು ಅವರ ಸಹಚರರು ಎಎಪಿಗೆ ಸೇರ್ಪಡೆಯಾಗಿದ್ದಾರೆ.
‘ಬ್ರಹ್ಮ್ ಸಿಂಗ್ ಅವರು ದೆಹಲಿಯ ದೊಡ್ಡ ನಾಯಕರಾಗಿದ್ದು, ಛತ್ತರ್‌ಪುರ ಮತ್ತು ಮೆಹ್ರೌಲಿ ಕ್ಷೇತ್ರಗಳಿಂದ ಮೂರು ಬಾರಿ ಶಾಸಕರಾಗಿದ್ದರು. ಅವರ ಸೇರ್ಪಡೆಯು ಎಎಪಿ ಕುಟುಂಬಕ್ಕೆ ಮತ್ತಷ್ಟು ಬಲತುಂಬಿದೆ’ ಎಂದು ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿದರು.
‘ಕೇಜ್ರಿವಾಲ್ ಅವರ ಕಾರ್ಯಶೈಲಿ ಮತ್ತು ಜನರಿಗಾಗಿ ಕೆಲಸ ಮಾಡುವ ಅವರ ಉತ್ಸಾಹದಿಂದ ಪ್ರಭಾವಿತನಾಗಿದ್ದು, ಎಎಪಿಗಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತೇನೆ’ ಎಂದು ಬ್ರಹ್ಮ್ ಸಿಂಗ್ ಭರವಸೆ ನೀಡಿದರು.
ಎಪ್ಪತ್ತು ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭೆಗೆ ಮುಂದಿನ ವರ್ಷ ಫೆಬ್ರುವರಿಯಲ್ಲಿ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.