ADVERTISEMENT

ನನ್ನದೇನೂ ತಪ್ಪಿಲ್ಲ, ನಾನೇನೂ ಮಾಡ್ಲಿಲ್ಲ: ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 14:07 IST
Last Updated 15 ಡಿಸೆಂಬರ್ 2019, 14:07 IST
   

ಮೀರತ್ : ನಾನು ಯಾರಿಗೂ ಏನೂ ಮಾಡಿಲ್ಲ. ನನ್ನದೇನೂ ತಪ್ಪಿಲ್ಲ, ಇದೆಲ್ಲಾ ಸುಳ್ಳು ಸುದ್ದಿಎಂದು ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಹೇಳಿದ್ದಾರೆ.

ಕಳೆದ ರಾತ್ರಿ ಮೀರತ್ ನ ಮನೆಯಲ್ಲಿದ್ದ ಪ್ರವೀಣ್ ಕುಮಾರ್ ನೆರೆಮನೆಯ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅವರ ಏಳು ವರ್ಷದ ಮಗನನ್ನು ನೂಕಿದ್ದಾರೆ ಎಂದು ಆರೋಪಿಸಿ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಈ ಸಂಬಂಧ ಪೊಲೀಸರು ಪ್ರವೀಣ್ ಕುಮಾರ್ ಅವರನ್ನು ವಿಚಾರಣೆ ನಡೆಸಿದಾಗ ನಾನೇನೂ ಮಾಡ್ಲಿಲ್ಲ, ನನ್ನದೇನೂ ತಪ್ಪಿಲ್ಲ. ನಾನು ಯಾವುದೇ ಮಗುವನ್ನೂ ನೂಕಿಲ್ಲ. ಬಾಲಕನ ತಂದೆ ನನ್ನ ಸರವನ್ನು ಹಿಡಿದು ಎಳೆಯಲು ಯತ್ನಿಸಿದರು. ನನ್ನ ಮೂಗಿಗೆ ಗುದ್ದಿದರು. ಇದೆಲ್ಲಾ ಸುಳ್ಳು ಎಂದು ಹೇಳಿಕೆ ನೀಡಿದ್ದಾರೆ.

ADVERTISEMENT

ಈ ಸಂಬಂಧ ಇಬ್ಬರಿಂದಲೂ ದೂರುಗಳನ್ನು ಪಡೆದಿದ್ದೇವೆ. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಸ್ ಪಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.