ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್(81) ಅವರು ಶನಿವಾರ ನಿಧನರಾದರು.
ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದಶೀಲಾ ದೀಕ್ಷಿತ್ ಅವರು 1998 ರಿಂದ 2013ರವರೆಗೆ ದೆಹಲಿ ಮುಖ್ಯಮಂತ್ರಿಯಾಗಿದ್ದರು.
2014ರಲ್ಲಿ ಕೇರಳಾ ರಾಜ್ಯಪಾಲರಾಗಿ(ಮಾರ್ಚ್–ಆಗಸ್ಟ್ ವರೆಗೆ) ಸೇವೆ ಸಲ್ಲಿಸಿದ್ದರು. 2019ರ ಜನವರಿಯಲ್ಲಿದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ(ಡಿಪಿಸಿಸಿ) ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.
81ನೇ ವಯಸ್ಸಿನಲ್ಲಿ ದೆಹಲಿ ಈಶಾನ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿಕಣಕ್ಕಿಳಿಯುವ ಮೂಲಕ ಶೀಲಾ ದೀಕ್ಷಿತ್ ಒಮ್ಮೆಲೇ ರಾಷ್ಟ್ರದ ಗಮನ ಸೆಳೆದಿದ್ದರು.
ಜನನ: 1938 ಮಾರ್ಚ್ 31
ಸ್ಥಳ: ಪಂಜಾಬ್‌ನ ಕಪುರ್ತಲ
ವಿದ್ಯಾಭ್ಯಾಸ: ಎಂ.ಎ(ಇತಿಹಾಸ)
ಅನಾರೋಗ್ಯದಿಂದ ಎಸ್ಕಾರ್ಟ್ಸ್ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಶೀಲಾ ದೀಕ್ಷಿತ್ ಅವರಿಗೆ ಮಧ್ಯಾಹ್ನ 3:15ಕ್ಕೆ ಹೃದಯಾಘಾತ ಉಂಟಾಗಿತ್ತು. ಕೃತಕ ಉಸಿರಾಟ ವ್ಯವಸ್ಥೆಯಡಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, 3:55ಕ್ಕೆ ಅವರು ನಿಧನರಾದರುಎಂದು ಆಸ್ಪತ್ರೆಯ ನಿರ್ದೇಶಕ ಡಾ.ಅಶೋಕ್ ಸೇಠ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
We regret to hear of the passing of Smt Sheila Dikshit. Lifelong congresswoman and as three time CM of Delhi she transformed the face of Delhi. Our condolences to her family and friends. Hope they find strength in this time of grief. pic.twitter.com/oNHy23BpAL
— Congress (@INCIndia) July 20, 2019
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.