ADVERTISEMENT

ಯುಪಿಎಸ್‌ಸಿ ಸದಸ್ಯರಾಗಿ ಸಂಜಯ್‌ ವರ್ಮಾ ನೇಮಕ

ಪಿಟಿಐ
Published 1 ಫೆಬ್ರುವರಿ 2024, 13:30 IST
Last Updated 1 ಫೆಬ್ರುವರಿ 2024, 13:30 IST
   

ನವದೆಹಲಿ: ‘ಮಾಜಿ ರಾಜತಾಂತ್ರಿಕ ಅಧಿಕಾರಿ ಸಂಜಯ್‌ ವರ್ಮಾ ಅವರು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಸದಸ್ಯರಾಗಿ ನೇಮಕಗೊಂಡಿದ್ದಾರೆ’ ಎಂದು ಸಿಬ್ಬಂದಿ ಸಚಿವಾಲಯ ಗುರುವಾರ ತಿಳಿಸಿದೆ.‌

‘1990ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆಯ (ಐಎಫ್‌ಎಸ್‌) ಅಧಿಕಾರಿಯಾದ ಸಂಜೀವ್‌ ಅವರು ಗುರುವಾರದಂದು ಇಲ್ಲಿ ಯುಪಿಎಸ್‌ಸಿ ಅಧ್ಯಕ್ಷ ಮನೋಜ್‌ ಸೋನಿ ಸಮ್ಮುಖದಲ್ಲಿ ಕಚೇರಿ ಮತ್ತು ಗೌಪ್ಯತಾ ಪ್ರಮಾಣ ವಚನ ಸ್ವೀಕರಿಸಿದರು’ ಎಂದು ಅದು ಹೇಳಿದೆ.

ಸಂಜೀವ್‌ ಅವರು ಸ್ಪೇನ್ ಮತ್ತು ಅಂಡೊರ್‍ರಾ, ಇಥಿಯೋಪಿಯಾ, ಜಿಬೌಟಿ ಮತ್ತು ಆಫ್ರಿಕನ್ ಯೂನಿಯನ್‌ನಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ದುಬೈನಲ್ಲಿ ಕಾನ್ಸುಲ್‌ ಜನರಲ್‌, ಬೀಜಿಂಗ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಸಲಹೆಗಾರ (ಆರ್ಥಿಕ ಮತ್ತು ವಾಣಿಜ್ಯ ವಿಭಾಗ), ಕಠ್ಮಂಡುವಿನ ಭಾರತೀಯ ರಾಯಭಾರ ಕಚೇರಿಯಲ್ಲಿ ವಕ್ತಾರ ಮತ್ತು ಸಲಹೆಗಾರ (ಪತ್ರಿಕಾ, ಮಾಹಿತಿ ಮತ್ತು ಸಂಸ್ಕೃತಿ ವಿಭಾಗ), ಮನಿಲಾದ ಭಾರತೀಯ ರಾಯಭಾರ ಕಚೇರಿಯ ಎರಡನೇ ಕಾರ್ಯದರ್ಶಿ (ಪತ್ರಿಕಾ ಮತ್ತು ರಾಜಕೀಯ) ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ADVERTISEMENT

ಯುಪಿಎಸ್‌ಸಿ ಸದಸ್ಯರನ್ನು ಆರು ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಿನವರೆಗೆ ನೇಮಕ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.