ADVERTISEMENT

ಲೈಂಗಿಕ ಕಿರುಕುಳದ ಎಲ್ಲ ಆರೋಪಗಳಿಂದ ಪತ್ರಕರ್ತ ತರುಣ್ ತೇಜ್‌ಪಾಲ್ ಖುಲಾಸೆ

​ಪ್ರಜಾವಾಣಿ ವಾರ್ತೆ
Published 21 ಮೇ 2021, 6:22 IST
Last Updated 21 ಮೇ 2021, 6:22 IST
ಗೋವಾದ ಸೆಷನ್ಸ್ ನ್ಯಾಯಾಲಯದಿಂದ ಹೊರ ನಡೆದ ತೆಹಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್             –ಎಎಫ್‌ಪಿ ಚಿತ್ರ
ಗೋವಾದ ಸೆಷನ್ಸ್ ನ್ಯಾಯಾಲಯದಿಂದ ಹೊರ ನಡೆದ ತೆಹಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್             –ಎಎಫ್‌ಪಿ ಚಿತ್ರ   

ಪಣಜಿ: ತೆಹಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಅವರು ತಮ್ಮ ವಿರುದ್ಧದ ಎಲ್ಲ ಲೈಂಗಿಕ ದೌರ್ಜನ್ಯ ಆರೋಪಗಳಿಂದ ಖುಲಾಸೆಗೊಂಡಿದ್ದಾರೆ.

ತೇಜ್‌ಪಾಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆಗೋವಾದ ಸೆಷನ್ಸ್ ನ್ಯಾಯಾಲಯವುತೀರ್ಪುಪ್ರಕಟಿಸಿದೆ.

ಏಪ್ರಿಲ್ 27ರಂದೇತೀರ್ಪು ಪ್ರಕಟಿಸಬೇಕಿತ್ತು. ಆದರೆ ನ್ಯಾಯಾಧೀಶರು ತೀರ್ಪು ನೀಡುವ ದಿನಾಂಕವನ್ನು ಮೇ 12ಕ್ಕೆ ಮುಂದೂಡಿದ್ದರು. ಬಳಿಕ ಈ ದಿನಾಂಕವನ್ನು ಮೇ 19ಕ್ಕೆ ನಿಗದಿ ಮಾಡಲಾಗಿತ್ತು. ಆದರೆ, 19ರಂದು ವಿದ್ಯುತ್ ಕಡಿತದ ಕಾರಣ ತೀರ್ಪನ್ನು ಇಂದಿಗೆ ಕಾಯ್ದಿರಿಸಲಾಗಿತ್ತು.

ADVERTISEMENT

2013ರಲ್ಲಿ ಗೋವಾದ ಐಷಾರಾಮಿ ಹೋಟೆಲ್‌ನ ಲಿಫ್ಟ್‌ನೊಳಗೆ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ತರುಣ್ ಎದುರಿಸುತ್ತಿದ್ದರು.


ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನವೆಂಬರ್ 2013ರಲ್ಲಿ ತೇಜ್‌ಪಾಲ್ ವಿರುದ್ಧ ಎಫ್ಐಆರ್ ದಾಖಲಿಸಿಬಂಧಿಸಲಾಗಿತ್ತು. ಮೇ. 2014ರಿಂದ ಅವರು ಜಾಮೀನು ಪಡೆದು ಹೊರಗಿದ್ದರು.

ಗೋವಾ ಅಪರಾಧ ವಿಭಾಗವು ತೇಜ್‌ಪಾಲ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು. ಐಪಿಸಿ ಸೆಕ್ಷನ್ 341, 342, 354, 354-ಎ (ಲೈಂಗಿಕ ಕಿರುಕುಳ), 354-ಬಿ, 376 (2) (ಎಫ್) (ಮಹಿಳೆಯರ ಮೇಲೆ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಅತ್ಯಾಚಾರ ಎಸಗುವುದು) ಮತ್ತು 376 (2) ಕೆ) (ನಿಯಂತ್ರಣದ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ) ಅಡಿಯಲ್ಲಿ ಆರೋಪ ಎದುರಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.