ಮುಂಬೈ: 2012ರ ವಿಡಿಯೊಕಾನ್ ಸಾಲ ಹಗರಣ ಸಂಬಂಧ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಹಾಗೂ ಪತಿ ದೀಪಕ್ ಸೇರಿದಂತೆ ಮೂವರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
₹3,250 ಕೋಟಿ ಹಣವನ್ನು ವಿಡಿಯೊಕಾನ್ ಗ್ರೂಪ್‌ಗೆ ಸಾಲ ನೀಡಿರುವ ಬಗ್ಗೆ ಸಿಬಿಐ ತನಿಖೆ ಕೈಗೊಂಡಿದ್ದು, ವಿಡಿಯೊಕಾನ್ ನಿರ್ವಹಣಾ ನಿರ್ದೇಶಕ ವೇಣುಗೋಪಾಲ್ ಧೂತ್ ಅವರ ವಿರುದ್ಧವೂ ಆರೋಪ ಕೇಳಿ ಬಂದಿತ್ತು. ಎಫ್‌ಐಆರ್‌ನಲ್ಲಿಯೂ ಅವರ ಹೆಸರನ್ನೂ ದಾಖಲಿಸಲಾಗಿದೆ
ಮುಂಬೈನ ನುಪವರ್ ಕಂಪೆನಿ, ವಿಡಿಯೊಕಾನ್ ಸಂಸ್ಥೆ, ಸುಪ್ರೀಂ ಎನರ್ಜಿ ಸೇರಿದಂತೆ ಒಟ್ಟು ನಾಲ್ಕು ಕಂಪೆನಿಗಳ ಮೇಲೆ ದಾಳಿ ನಡೆಸಿದ ಸಿಬಿಐ ಶೋಧಕಾರ್ಯ ಕೈಗೊಂಡಿದೆ.
ಏನಿದು ಹಗರಣ?
ವಿಡಿಯೊಕಾನ್ ಸಂಸ್ಥೆಯು 2012ರಲ್ಲಿ ಐಸಿಐಸಿಐ ಬ್ಯಾಂಕ್‌ನಿಂದ ₹3,250 ಕೋಟಿ ಹಣವನ್ನು ಸಾಲ ಪಡೆದಿತ್ತು. ಕೆಲವು ತಿಂಗಳುಗಳ ನಂತರ ದೀಪಕ್ ಕೊಚ್ಚರ್ ಹಾಗೂ ಚಂದಾ ಕೊಚ್ಚರ್ ನೇತೃತ್ವದ ನುಪವರ್ ಕಂಪೆನಿಯಲ್ಲಿ ಹೂಡಿಕೆ ಮಾಡಿತ್ತು. ಇದಾದ ಹತ್ತು ತಿಂಗಳ ನಂತರಅಂದರೆ ಕಳೆದ ಮಾರ್ಚ್‌ನಲ್ಲಿ ಸಿಬಿಐ ಪ್ರಾಥಮಿಕ ತನಿಖೆ ಕೈಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.