ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ಸೆಷನ್ಸ್‌ ಕೋರ್ಟ್‌ಗೆ ಹಾಜರಾದ ಸೆಂಥಿಲ್‌

ಪಿಟಿಐ
Published 16 ಜುಲೈ 2024, 13:53 IST
Last Updated 16 ಜುಲೈ 2024, 13:53 IST
ಸೆಂಥಿಲ್‌ ಬಾಲಾಜಿ– ಪಿಟಿಐ ಚಿತ್ರ
ಸೆಂಥಿಲ್‌ ಬಾಲಾಜಿ– ಪಿಟಿಐ ಚಿತ್ರ   

ಚೆನ್ನೈ: ಹಣ ಅಕ್ರಮ ವರ್ಗಾವಣೆಯಲ್ಲಿ ಕಳೆದ ವರ್ಷ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧಿತರಾಗಿರುವ ತಮಿಳುನಾಡಿನ ಮಾಜಿ ಸಚಿವ ವಿ. ಸೆಂಥಿಲ್‌ ಬಾಲಾಜಿ ಮಂಗಳವಾರ ಸೆಷನ್ಸ್ ಕೋರ್ಟ್‌ನ ಮುಂದೆ ಹಾಜರಾದರು.

ಈ ವೇಳೆ ತಮ್ಮ ಬ್ಯಾಂಕ್‌ ಖಾತೆಗೆ ಸಂಬಂಧಿಸಿದಂತೆ 2022ರ ಫೆ. 22ರಂದು ಕರೂರ್‌ನ ಸಿಟಿ ಯೂನಿಯನ್‌ ಬ್ಯಾಂಕ್‌ ಲಿಮಿಟೆಡ್‌ನ ವ್ಯವಸ್ಥಾಪಕರಿಗೆ ಬರೆದಿದ್ದ ಪತ್ರದ ಪ್ರತಿಯನ್ನು ಪಡೆದುಕೊಂಡರು. ಜಾರಿ ನಿರ್ದೇಶನಾಲಯವು ತನಿಖೆ ವೇಳೆ ಈ ಪತ್ರವನ್ನು ಸಂಗ್ರಹಿಸಿತ್ತು.

ನಂತರ ಸೆಂಥಿಲ್‌ ಅವರನ್ನು ಜುಲೈ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸೆಷನ್ಸ್‌ ಕೋರ್ಟ್‌ನ ನ್ಯಾಯಾಧೀಶ ಎಸ್‌. ಅಲ್ಲಿ ಅವರು ಆದೇಶ ನೀಡಿದರು.

ADVERTISEMENT

ಈ ಹಿಂದಿನ ಎಐಎಡಿಎಂಕೆ ಸರ್ಕಾರದಲ್ಲಿ ನಡೆದ ‘ಉದ್ಯೋಗಕ್ಕಾಗಿ ನಗದು’ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಾಲಾಜಿ ಅವರನ್ನು ಕಳೆದ ವರ್ಷ ಜೂನ್ 14 ರಂದು ಇ.ಡಿ ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.