ADVERTISEMENT

BJP ತೊರೆದ ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್: ನಾಳೆ ಕಾಂಗ್ರೆಸ್‌ಗೆ ಸೇರ್ಪಡೆ

ಪಿಟಿಐ
Published 8 ಏಪ್ರಿಲ್ 2024, 12:53 IST
Last Updated 8 ಏಪ್ರಿಲ್ 2024, 12:53 IST
<div class="paragraphs"><p>ಬಿರೇಂದರ್ ಸಿಂಗ್</p></div>

ಬಿರೇಂದರ್ ಸಿಂಗ್

   

(ಪಿಟಿಐ ಚಿತ್ರ)

ಚಂಡೀಗಢ: ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರುವುದಾಗಿ ಸೋಮವಾರ ಹೇಳಿದ್ದಾರೆ. ಅವರ ಮಗ ಬ್ರಿಜೇಂದ್ರ ಸಿಂಗ್ ಸುಮಾರು ಒಂದು ತಿಂಗಳ ಹಿಂದೆ ಕಾಂಗ್ರೆಸ್‌ಗೆ ಸೇರಿದ್ದರು. ಬಿರೇಂದರ್ ಪತ್ನಿ ಪ್ರೇಮಲತಾ ಸಿಂಗ್ ಕೂಡ ಬಿಜೆಪಿ ತೊರೆದಿದ್ದಾರೆ.

ADVERTISEMENT

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ‌ಮಾತನಾಡಿದ ಬಿರೇಂದರ್ ಸಿಂಗ್, 'ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಮತ್ತು ನನ್ನ ರಾಜೀನಾಮೆಯನ್ನು ಪಕ್ಷದ ಮುಖ್ಯಸ್ಥ ಜೆ.ಪಿ ನಡ್ಡಾ ಅವರಿಗೆ ಕಳುಹಿಸಿದ್ದೇನೆ. 2014-2019ರ ಅವಧಿಯಲ್ಲಿ ಶಾಸಕಿಯಾಗಿದ್ದ ನನ್ನ ಪತ್ನಿ ಪ್ರೇಮಲತಾ ಕೂಡ ಪಕ್ಷವನ್ನು ತೊರೆದಿದ್ದಾರೆ. ನಾಳೆ ನಾವು (ಮಂಗಳವಾರ) ಕಾಂಗ್ರೆಸ್‌ಗೆ ಸೇರುತ್ತೇವೆ' ಎಂದು ತಿಳಿಸಿದ್ದಾರೆ.

ಬಿರೇಂದರ್ ಸಿಂಗ್ ಅವರು ಸುಮಾರು 10 ವರ್ಷಗಳ ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಸರ್ಕಾರದಲ್ಲಿ ಬಿರೇಂದರ್ ಸಿಂಗ್ ಕೇಂದ್ರ ಉಕ್ಕು ಸಚಿವರಾಗಿ ಸೇವೆಸಲ್ಲಿಸಿದ್ದರು. ಅಲ್ಲದೇ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ಅಲ್ಲದೇ ಹರಿಯಾಣದ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿಯೂ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಕೃಷಿ ಕಾನೂನುಗಳ ವಿರುದ್ಧದ ರೈತರ ಹೋರಾಟದ ಸಮಯದಲ್ಲಿ, ಬಿರೇಂದರ್ ಸಿಂಗ್ ರೈತರಿಗೆ ತಮ್ಮ ಬೆಂಬಲ ನೀಡಿದ್ದರು. ಬಿರೇಂದರ್ ಸಿಂಗ್, ಸ್ವಾತಂತ್ರ್ಯ ಪೂರ್ವದಲ್ಲಿ ರೈತರ ಹಿತಾಸಕ್ತಿಗಾಗಿ ಹೋರಾಟ ನಡೆಸಿರುವ ಪ್ರಮುಖ ರಾಜಕಾರಣಿ ಸರ್. ಛೋಟು ರಾಮ್ ಅವರ ಮೊಮ್ಮಗನಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.