ನವದೆಹಲಿ: ಗುಜರಾತ್‌ನ ಕಛ್‌ನಲ್ಲಿ1.10 ಕೋಟಿ ವರ್ಷಗಳ ಹಿಂದಿನ ವಾನರನ ಪಳೆಯುಳಿಕೆ ಪತ್ತೆಯಾಗಿದೆ. ಇದೇ ಮೊದಲ ಬಾರಿಗೆ ಹಿಮಾಲಯ ಪರ್ವತ ಶ್ರೇಣಿಗಿಂತ ಹೊರಗೆ ಇಷ್ಟು ಹಳೆಯ ಪಳೆಯುಳಿಕೆ ಪತ್ತೆಯಾಗಿದೆ.
ಮಾನವನ ಪೂರ್ವಜ ಪ್ರಾಣಿ ಎನಿಸಿರುವ ವಾನರನ ಈ ಪಳೆಯುಳಿಕೆಯಿಂದ ಮಾನವ ವಿಕಾಸದ ಹೊಸ ಅಧ್ಯಯನವೊಂದು ತೆರೆದುಕೊಳ್ಳಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಈ ಮೊದಲು ಭಾರತ, ಪಾಕಿಸ್ತಾನ ಮತ್ತು ನೇಪಾಳದ ಹಿಮಾಲಯ ಪ್ರದೇಶದಲ್ಲಿ ಮಾತ್ರ ಈ ಪ್ರಾಣಿ ಕಂಡುಬಂದಿತ್ತು’ ಎಂದು ರೂರ್ಕಿಯ ಐಐಟಿಯಲ್ಲಿನ ಸಂಶೋಧಕ ಸುನಿಲ್ ಬಾಜಪೇಯಿ ಹೇಳಿದ್ದಾರೆ.
ಇಂತಹ ಸಿವಪಿಥೆಕಸ್ ವಾನರಗಳು ಶಿವಾಲಿಕ ಪರ್ವತಶ್ರೇಣಿ, ಪಾಕಿಸ್ತಾನದ ಪೊತ್ವಾರ್ ಪ್ರಸ್ಥಭೂಮಿ, ಭಾರತದ ರಾಮನಗರ ಮತ್ತು ಹರಿ ತಲ್ಯಂಗರ್, ನೇಪಾಳದ ಚುರಿಯಾ ಬೆಟ್ಟಗಳಲ್ಲಿ ಕಾಣಸಿಗುತ್ತಿದ್ದವು. ಇದೇ ಮೊದಲ ಬಾರಿಗೆ ಕಛ್‌ನ ತಾಪರ್‌ನಲ್ಲಿ ಈ ಪಳೆಯುಳಿಕೆ ಸಿಕ್ಕಿದೆ ಎಂದು ಅವರು ಹೇಳಿದರು.
*ಪಳೆಯುಳಿಕೆಯ ದವಡೆಗಳನ್ನು ಪರಿಶೀಲಿಸಿದಾಗ, ಇದು ‘ಸಿವಪಿಥೆಕಸ್’ ಪ್ರಾಣಿ ಪ್ರಭೇದಕ್ಕೆ ಸೇರಿದ್ದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.