ADVERTISEMENT

ಮಧ್ಯಪ್ರದೇಶ: ಬಾವಿಯೊಳಗೆ ವಿಷಕಾರಿ ಅನಿಲ ಸೇವಿಸಿ ನಾಲ್ವರು ಸಾವು

ಪಿಟಿಐ
Published 26 ಜುಲೈ 2024, 11:20 IST
Last Updated 26 ಜುಲೈ 2024, 11:20 IST
<div class="paragraphs"><p> ಬಾವಿ (ಸಾಂದರ್ಭಿಕ ಚಿತ್ರ)</p></div>

ಬಾವಿ (ಸಾಂದರ್ಭಿಕ ಚಿತ್ರ)

   

ಇಂದೋರ್: ಮಧ್ಯಪ್ರದೇಶದ ಕಟ್ನಿಯಲ್ಲಿನ ಬಾವಿಯೊಂದರಲ್ಲಿ ವಿಷಕಾರಿ ಅನಿಲ ಸೇವಿಸಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಹ್ಲಾ-ಜುಹ್ಲಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಆರಂಭದಲ್ಲಿ ರಾಮ್ ಭಯ್ಯಾ ದುಬೆ (36) ನೀರಿನ ಪಂಪ್ ಅನ್ನು ಅಳವಡಿಸಲು ಬಾವಿಯೊಳಗೆ ಇಳಿದಿದ್ದರು. ಬಳಿಕ ಕೆಲವೇ ಹೊತ್ತಿನಲ್ಲಿ ಅವರು ಪ್ರಜ್ಞಾಹೀನರಾಗಿದ್ದರು. ಇದನ್ನು ಕಂಡು ರಾಮ್ ಅವರ ಸೋದರಳಿಯ ಕೂಡ ಬಾವಿಗೆ ಇಳಿದಿದ್ದ. ಆದರೆ, ಆತ ಕೂಡ ಅಸ್ವಸ್ಥನಾಗಿದ್ದ ಎಂದು ಅವರು ಹೇಳಿದ್ದಾರೆ.

ADVERTISEMENT

ರಾಮ್ ಭಯ್ಯಾ ಮತ್ತು ಅವರ ಸೋದರಳಿಯ ಕಾಣಿಸದೆ ಇದ್ದಾಗ ಸ್ಥಳದಲ್ಲಿದ್ದ ರಾಜೇಶ್ ಕುಶ್ವಾಹ (30) ಮತ್ತು ಪಿಂಟೂ ಕುಶ್ವಾಹ ಬಾವಿಗೆ ಇಳಿದಿದ್ದರು. ಆದರೆ, ಎಲ್ಲರೂ ಪ್ರಜ್ಞಾಹೀನರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಕುರಿತು ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಜಿಲ್ಲಾಧಿಕಾರಿ ದಿಲೀಪ್ ಯಾದವ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅಭಿಜೀತ್ ರಂಜನ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಉಮಾರಿಯಾ ಜಿಲ್ಲೆಯಿಂದ ಗಣಿ ತಜ್ಞರ ತಂಡವನ್ನು ಕರೆಸಲಾಗಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಾವಿಯೊಳಗೆ ಮೂರು ರೀತಿಯ ವಿಷಕಾರಿ ಅನಿಲಗಳು ಹೊರಹೊಮ್ಮುತ್ತಿವೆ ಎಂದು ಗಣಿ ತಜ್ಞರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.