ADVERTISEMENT

ಚೆನ್ನೈ | ಲಾರಿಗೆ ಗುದ್ದಿದ ಕಾರು: ಸ್ಥಳದಲ್ಲೇ ನಾಲ್ವರು ಸ್ನೇಹಿತರ ಸಾವು

ಪಿಟಿಐ
Published 4 ಸೆಪ್ಟೆಂಬರ್ 2024, 8:10 IST
Last Updated 4 ಸೆಪ್ಟೆಂಬರ್ 2024, 8:10 IST
   

ಚೆನ್ನೈ: ಭಾರಿ ಸಂಚಾರ ದಟ್ಟಣೆ ಇದ್ದ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಟ್ರಕ್ ಒಂದಕ್ಕೆ ಕಾರು ಡಿಕ್ಕಿ ಹೊಡೆದು ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರಿ ವೇಗದಲ್ಲಿದ್ದ ಕಾರು ಮೊದಲು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ನಿಯಂತ್ರಣ ತಪ್ಪಿ ಲಾರಿಯ ಹಿಂಭಾಗಕ್ಕೆ ಗುದ್ದಿದೆ. ಕಾರಲ್ಲಿದ್ದ ನಾಲ್ವರೂ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈಸ್ಟ್‌ ಕೋಸ್ಟ್ ರಸ್ತೆಯ ಸೆಮಂಚೇರಿಕುಪ್ಪಂ ಎಂಬಲ್ಲಿ ಬುಧವಾರ ಬೆಳಿಗ್ಗೆ ಘಟನೆ ನಡೆದಿದೆ.

ADVERTISEMENT

‌ಸೆಪ್ಟೆಂಬರ್ 3ರಂದು ಮಲೇಷ್ಯಾದಿಂದ ಆಗಮನಿಸಿದ್ದ ಮೊಹಮ್ಮದ್ ಆಶಿಕ್‌, ತನ್ನ ಮೂವರು ಸ್ನೇಹಿತರೊಂದಿಗೆ ಪುದುಚೇರಿ–ಚೆನ್ನೈ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಆದಿಲ್ ಮೊಹಮ್ಮದ್, ಅಸ್ಲಾಫ್ ಅಹಮದ್ ಹಾಗೂ ಸುಲ್ತಾನ್ ಮೃತರು.

ಅಪಘಾತ ನಡೆಯುವ ವೇಳೆ ಟ್ರಕ್‌ ಹಾಳಾಗಿ ರಸ್ತೆ ಬದಿ ನಿಂತಿತ್ತು. ನಗರದ ಮೈಲಾಪುರದ ಸಾರಿಗೆ ಕಂಪನಿಯೊಂದಕ್ಕೆ ಸೇರಿದ ಟ್ರಕ್ ಇದು. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.