ನವದೆಹಲಿ: ಫ್ರಾನ್ಸ್ ಜೊತೆ ಭಾರತ ಮಾಡಿಕೊಂಡಿರುವ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ಅನ್ವಯ ಐದನೇ ಬ್ಯಾಚ್‌ನ ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್‌ನಿಂದ 8,000 ಕಿ.ಮೀ ಸಂಚರಿಸಿ ಭಾರತಕ್ಕೆ ಬಂದಿಳಿದಿವೆ ಎಂದು ಭಾರತೀಯ ವಾಯುಪಡೆ (ಐಎಎಫ್) ತಿಳಿಸಿದೆ.
ಭಾರತಕ್ಕೆ ಬಂದಿಳಿದ ರಫೇಲ್ ಯುದ್ಧ ವಿಮಾನಗಳ ಸಂಖ್ಯೆಯನ್ನು ಐಎಎಫ್ ಬಹಿರಂಗಪಡಿಸಿಲ್ಲ. ಆದರೆ, ಈ ಬೆಳವಣಿಗೆಗಳ ಬಗ್ಗೆ ಅರಿವಿರುವ ಮೂಲಗಳು ನಾಲ್ಕು ರಫೇಲ್ ವಿಮಾನಗಳು ಹೊಸ ಬ್ಯಾಚ್‌ನ ಭಾಗವಾಗಿವೆ ಎಂದು ತಿಳಿಸಿವೆ.
ಫ್ರಾನ್ಸ್‌ನಿಂದ ಹೊರಟ ಯುದ್ಧ ವಿಮಾನಗಳಿಗೆ ವಾಯುಮಾರ್ಗದಲ್ಲಿ ಇಂಧನ ತುಂಬುವಿಕೆ ನೆರವನ್ನು ಫ್ರಾನ್ಸ್‌ನ ವಾಯುಪಡೆ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನೀಡಿವೆ ಎಂದು ಐಎಎಫ್ ಹೇಳಿದೆ.
ಫ್ರಾನ್ಸ್ ಪ್ರವಾಸದಲ್ಲಿರುವ ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಅವರು ಫ್ರಾನ್ಸ್‌ನ ಮೆರಿಗ್ನಾಕ್ ವಾಯುನೆಲೆಯಲ್ಲಿ ವಿಮಾನಗಳಿಗೆ ಫ್ಲ್ಯಾಗ್ ಆಫ್ ಮಾಡಿದ್ದರು.
ಏರ್ ಚೀಫ್ ಮಾರ್ಷಲ್ ತಮ್ಮ ಐದು ದಿನಗಳ ಫ್ರಾನ್ಸ್ ಪ್ರವಾಸದ ಮೂರನೇ ದಿನ ರಫೇಲ್ ವಿಮಾನ ತರಬೇತಿ ಕೇಂದ್ರಕ್ಕೂ ಭೇಟಿ ನೀಡಿದ್ದರು.
ಏಪ್ರಿಲ್ 1ರಂದು ನಾಲ್ಕನೇ ಬ್ಯಾಚ್‌ನ 3 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿದ್ದವು.
ಅತ್ಯಾಧುನಿಕ ರಫೇಲ್ ಯುದ್ಧ ವಿಮಾನಗಳಿಂದಾಗಿ ಭಾರತದ ವಾಯುಪಡೆಯ ಬಲ ಮತ್ತಷ್ಟು ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.