ಅಮರಾವತಿ: ಅನಾಕಪಲ್ಲಿ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ವಿಷಪೂರಿತ ಆಹಾರ ಸೇವಿಸಿದ್ದ ನಾಲ್ವರು ಅನಾಥ ಮಕ್ಕಳು ಸೋಮವಾರ ಮೃತಪಟ್ಟಿದ್ದಾರೆ.
‘ಕೊಟಾರಟ್ಲಾ ಮಂಡಲದ ಕೈಲಾಸಪಟ್ಟಣಂನಲ್ಲಿ ಆರಾಧಾನಾ ಟ್ರಸ್ಟ್ ನಡೆಸುತ್ತಿದ್ದ ಅನಾಥಾಲಯದಲ್ಲಿ ಶನಿವಾರ ಸಮೋಸಾ, ಚಾಕೋಲೇಟ್ ತಿಂದ ತಕ್ಷಣವೇ 27 ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದರು. ಭಾನುವಾರ ವಾಂತಿ, ವಿಪರೀತ ಸುಸ್ತು ಕಾಣಿಸಿಕೊಂಡಿದ್ದ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೋಶುವಾ, ಭವಾನಿ, ಶ್ರದ್ಧಾ ಹಾಗೂ ನಿತ್ಯಾ ಮೃತಪಟ್ಟರು’ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತರೆ ಮಕ್ಕಳನ್ನು ವಿಶಾಖಪಟ್ಟಣದ ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಿದ್ದು, ಉತ್ತಮ ಚಿಕಿತ್ಸೆ ಕಲ್ಪಿಸುವಂತೆ ಅನಾಕಪಲ್ಲಿ ಜಿಲ್ಲಾಧಿಕಾರಿ ವಿಜಯಾ ಕೃಷ್ಣನ್ ಅವರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡುಸೂಚನೆ ನೀಡಿದ್ದಾರೆ. ಘಟನೆ ಕುರಿತಂತೆ ಸಮಗ್ರ ವರದಿ ಸಲ್ಲಿಸುವಂತೆ ಆದೇಶ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.