ADVERTISEMENT

ಶ್ರೀಲಂಕಾ ನೌಕಾಪಡೆಯಿಂದ ನಾಲ್ವರು ಭಾರತೀಯ ಮೀನುಗಾರರ ಬಂಧನ

ಪಿಟಿಐ
Published 18 ಜೂನ್ 2024, 12:55 IST
Last Updated 18 ಜೂನ್ 2024, 12:55 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚೆನ್ನೈ: ಪಾಕ್ ಜಲಸಂಧಿಯಲ್ಲಿ ಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆಯನ್ನು (ಐಎಂಬಿಎಲ್) ದಾಟಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ನಾಲ್ವರು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಮಂಗಳವಾರ ಬಂಧಿಸಿದೆ.

ಬಂಧಿತ ಮೀನುಗಾರರನ್ನು ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಕೆ.ಪಾರ್ತಿವನ್ (32), ಕೆ. ಸಾರಥಿ (28), ಎನ್. ರಾಮದಾಸ್ (52) ಹಾಗೂ ಕೆ. ಮುರಳಿ (42) ಎಂದು ಗುರುತಿಸಲಾಗಿದೆ.

ADVERTISEMENT

ಜೂ.17ರಂದು ಕೊಟ್ಟೈಪಟ್ಟಿನಂ ಮೀನುಗಾರಿಕಾ ಬಂದರಿನಿಂದ ತೆರಳಿದ್ದ ಇವರನ್ನು ನೆಡುಂತೀವು ಪ್ರದೇಶದಲ್ಲಿ ಬಂಧಿಸಲಾಗಿದೆ.

ಇಂದು ಬಂಧಿಸಲಾದ ಈ ನಾಲ್ವರು ಸೇರಿ, ಶ್ರೀಲಂಕಾ ನೌಕಾಪಡೆ ಈ ವರ್ಷ ಒಟ್ಟು 182 ಭಾರತೀಯ ಮೀನುಗಾರರನ್ನು ಬಂಧಿಸಿದೆ. ಕಳೆದ ವರ್ಷ(2023) ಸುಮಾರು 240ಕ್ಕೂ ಅಧಿಕ ಮೀನುಗಾರರನ್ನು ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.