ADVERTISEMENT

ಜೈಲಿನಿಂದ ಹೊರಬಂದು ಬೆಂಬಲಿಗರೊಂದಿಗೆ ರ್‍ಯಾಲಿ ನಡೆಸಿದ್ದ ರೌಡಿ: ಮತ್ತೆ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2024, 13:41 IST
Last Updated 26 ಜುಲೈ 2024, 13:41 IST
<div class="paragraphs"><p>ಗ್ಯಾಂಗ್‌ಸ್ಟರ್‌ ಹರ್ಷದ್ ಪಾಟಂಕರ್‌&nbsp;ರ್‍ಯಾಲಿ ನಡೆಸುತ್ತಿರುವ ದೃಶ್ಯ</p></div>

ಗ್ಯಾಂಗ್‌ಸ್ಟರ್‌ ಹರ್ಷದ್ ಪಾಟಂಕರ್‌ ರ್‍ಯಾಲಿ ನಡೆಸುತ್ತಿರುವ ದೃಶ್ಯ

   

–ಎಕ್ಸ್‌ (ಟ್ವಿಟರ್‌) ಚಿತ್ರ

ಮುಂಬೈ: ಜೈಲಿನಿಂದ ಬಿಡುಗಡೆಯಾಗಿದ್ದ ಮಹಾರಾಷ್ಟ್ರದ ​ಗ್ಯಾಂಗ್​ಸ್ಟರ್​ ಒಬ್ಬ ತೆರೆದ ಕಾರಿನಲ್ಲಿ ನಿಂತು, ಬೆಂಬಲಿಗರೊಂದಿಗೆ ರ್‍ಯಾಲಿ ನಡೆಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಕಾರಣಕ್ಕೆ ಆತನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಕೆಲವು ದಿನಗಳ ಹಿಂದೆ ಗ್ಯಾಂಗ್‌ಸ್ಟರ್‌ ಹರ್ಷದ್ ಪಾಟಂಕರ್‌ನನ್ನು ಮಹಾರಾಷ್ಟ್ರದ ಅಪಾಯಕಾರಿ ಚಟುವಟಿಕೆಗಳ ತಡೆ ಕಾಯ್ದೆ (ಎಂಪಿಡಿಎ) ಅಡಿಯಲ್ಲಿ ಪೊಲೀಸರು ಬಂಧಿಸಿದ್ದರು.

ಪ್ರಕರಣ ಸಂಬಂಧ ಜಾಮೀನು ಪಡೆದಿದ್ದ ಆರೋಪಿ ನಾಸಿಕ್ ರೋಡ್ ಸೆಂಟ್ರಲ್ ಕಾರಾಗೃಹದಿಂದ ಮಂಗಳವಾರ ಬಿಡುಗಡೆಯಾಗಿದ್ದ. ಬಳಿಕ ಬೆತೆಲ್‌ನಗರದಿಂದ ಅಂಬೇಡ್ಕರ್ ಚೌಕ್‌ದವರೆಗೆ ಬೆಂಬಲಿಗರೊಂದಿಗೆ ರ್‍ಯಾಲಿ ನಡೆಸಿದ್ದನು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಪಾಟಂಕರ್ ಮತ್ತು ಆತನ ಸಹಚರರು ಎಸ್‌ಯುವಿ ಕಾರು ಮತ್ತು 15 ದ್ವಿಚಕ್ರ ವಾಹನಗಳನ್ನು ಬಳಸಿ ರ್‍ಯಾಲಿ ನಡೆಸಿದ್ದರು. ಇದೇ ವೇಳೆ ಜೋರಾಗಿ ಘೋಷಣೆಗಳನ್ನು ಕೂಗುತ್ತಾ, ಹಾರ್ನ್ ಮಾಡುವ ಸಾರ್ವಜನಿಕರಿಗೆ ತೊಂದರೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಪಾಟಂಕರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 189 (2) ಅಡಿಯಲ್ಲಿ ಹೊಸ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆತನನ್ನು ಬಂಧಿಸಲಾಗಿದ್ದು, ಆತನ ಎಂಟು ಮಂದಿ ಸಹಚರರಿಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

2021ರ ಕೊಲೆ ಯತ್ನ ಪ್ರಕರಣ ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆಗಾಗಿ ಪಾಟಂಕರ್ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.