ADVERTISEMENT

ಅಮರನಾಥ ಯಾತ್ರೆ ಹೊರಟ 24ನೇ ತಂಡ: ಈವರೆಗೆ 3 ಲಕ್ಷ ಜನರ ಭೇಟಿ

ಪಿಟಿಐ
Published 21 ಜುಲೈ 2024, 5:43 IST
Last Updated 21 ಜುಲೈ 2024, 5:43 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಜಮ್ಮು ಮತ್ತು ಕಾಶ್ಮೀರ: ಮೂರು ಸಾವಿರ ಯಾತ್ರಾರ್ಥಿಗಳನ್ನು ಒಳಗೊಂಡ 24ನೇ ತಂಡವು ಭಾನುವಾರ ಜಮ್ಮುವಿನ ಬೇಸ್‌ ಕ್ಯಾಂಪ್‌ನಿಂದ ಅಮರನಾಥ ಯಾತ್ರೆ ಆರಂಭಿಸಿದೆ.

ಇವರಲ್ಲಿ 87 ಸಾಧುಗಳು, 15 ಸಾಧ್ವಿಗಳು. 707 ಮಹಿಳೆಯರು ಸೇರಿದ್ದು 123 ವಾಹನಗಳಲ್ಲಿ ಜಮ್ಮುವಿನ ಭಗವತಿ ಕ್ಯಾಂಪ್‌ನಿಂದ ಹೊರಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಜೂನ್‌ 29ರಂದು 52 ದಿನಗಳ ಅಮರನಾಥ ಯಾತ್ರೆ ಅನಂತ್‌ನಾಗ್‌ ಮತ್ತು ಪಹಲ್ಗಾಮ್‌ ಮಾರ್ಗಗಳಿಂದ ಆರಂಭವಾಗಿದೆ.

ಈವರೆಗೆ ಸುಮಾರು 3.90 ಲಕ್ಷ ಯಾತ್ರಾರ್ಥಿಗಳು ಅಮರನಾಥ ದರ್ಶನ ಪಡೆದಿದ್ದಾರೆ. 

ಆಗಸ್ಟ್‌ 19ರಂದು ಶ್ರಾವಣ ಮಾಸದ ಪೂರ್ಣಿಮೆಯಂದು ಯಾತ್ರೆ ಮುಕ್ತಾಯಗೊಳ್ಳಲಿದೆ. 

ಕಳೆದ ವರ್ಷ 4.5 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಅಮರನಾಥನ ದರ್ಶನ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.