ಗುಲ್ಮರ್ಗ್: ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಿಮ ಬೀಳಲು ಆರಂಭವಾಗಿದೆ. ಬೆಳ್ಳನೆಯ ಹೊದಿಕೆ ಹೊದ್ದ ಸುಂದರ ಕಾಶ್ಮೀರ ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಗುಲ್ಮಾರ್ಗ್‌ನಲ್ಲಂತೂ ಸಾವಿರಾರು ಪ್ರವಾಸಿಗರು ಹಿಮದಲ್ಲಿ ಮಿಂದೆದ್ದು ಖುಷಿಪಡುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪ್ರವಾಸೋಧ್ಯಮ ಇಲಾಖೆಯ ಮಾಹಿತಿ ಪ್ರಕಾರ, ಫೆಬ್ರುವರಿ1 ರಿಂದ 6ರವರೆಗೆ ಕೇವಲ ಆರು ದಿನಗಳ ಅಂತರದಲ್ಲಿ 19,532 ಪ್ರವಾಸಿಗರು ಭೇಟಿ ನೀಡಿದ್ದು, ದಿನದಿಂದ ದಿನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
‘ಕಾಶ್ಮೀರದಲ್ಲಿ ಹಿಮ ಬೀಳಲು ಆರಂಭವಾಗಿರುವುದು ತಡವಾಗಿದ್ದರಿಂದ ನಮ್ಮ ಪ್ರವಾಸವನ್ನು ಎರಡು ತಿಂಗಳು ಮುಂದೂಡಬೇಕಾಯಿತು. ಆದರೆ ಈಗ ಕಾಶ್ಮೀರಕ್ಕೆ ಬಂದು ಕನಸು ನನಸಾದಂತಾಗಿದೆ’ ಎಂದು ಪ್ರವಾಸಿಗರೊಬ್ಬರು ಹೇಳಿದ್ದಾರೆ.
ಪ್ರತಿವರ್ಷ ಫೆಬ್ರುವರಿಯಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆಂದೇ ಖೇಲೊ ಇಂಡಿಯಾ ಗೇಮ್‌ಗಳನ್ನು ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ಏರ್ಪಡಿಸುತ್ತದೆ. ಈ ಬಾರಿ ಮೊದಲ ಆವೃತ್ತಿಯನ್ನು ಲಡಾಖ್‌ನಲ್ಲಿ ಆಯೋಜಿಸಲಾಗುತ್ತು. ಎರಡನೇ ಆವೃತ್ತಿಯನ್ನು ಇದೇ 21 ರಿಂದ 25ರವರೆಗೆ ಗುಲ್ಮಾರ್ಗ್‌ನಲ್ಲಿ ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.