ನವದೆಹಲಿ: ಪುಣೆಯಿಂದ ದೆಹಲಿಗೆ ಆಗಮಿಸಿದ ಏರ್ ಇಂಡಿಯಾ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಸಂಜೆ 5.44ಕ್ಕೆ ವಿಮಾನ ಪುಣೆಯಿಂದ ಆಗಮಿಸಿತ್ತು. ಅದರಲ್ಲಿ 180 ಪ್ರಯಾಣಿಕರಿದ್ದರು ಎಂದು ಮೂಲಗಳು ತಿಳಿಸಿವೆ.
‘ಪುಣೆ-ದೆಹಲಿ ನಡುವೆ ಕಾರ್ಯಾಚರಿಸುಸುತ್ತಿರುವ ಏರ್ ಇಂಡಿಯಾ ವಿಮಾನ AI–858ರ ವಿಂಡ್‌ಶೀಲ್ಡ್‌ನ ಬಲಭಾಗದಲ್ಲಿ (ಸ್ಟಾರ್‌ಬೋರ್ಡ್ ಬದಿಯಲ್ಲಿ) ಸಣ್ಣ ಬಿರುಕು ಕಾಣಿಸಿಕೊಂಡ ನಂತರ, ನಿಗದಿತ ಆಗಮನದ ಸಮಯಕ್ಕಿಂತ ಮುಂಚಿತವಾಗಿ ಸುರಕ್ಷಿತವಾಗಿ ದೆಹಲಿಗೆ ಬಂದಿಳಿಯಿತು’ಎಂದು ಏರ್‌ಲೈನ್ಸ್ ತಿಳಿಸಿದೆ.
ಎಲ್ಲ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅದು ಹೇಳಿದೆ.
ವಿಮಾನವು ಅಗತ್ಯ ನಿರ್ವಹಣೆ ಪ್ರಕ್ರಿಯೆಗೆ ಒಳಗಾಗುತ್ತದೆ ಮತ್ತು ಅದರ ವಿಂಡ್‌ಶೀಲ್ಡ್ ಅನ್ನು ಬದಲಾಯಿಸಲಾಗುತ್ತದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.