ADVERTISEMENT

ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಸಿದ್ದಾರ್ಥ ವಶಿಷ್ಟ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 12:16 IST
Last Updated 1 ಮಾರ್ಚ್ 2019, 12:16 IST
   

ಚಂಡೀಗಢ: ಶ್ರೀನಗರ ಸಮೀಪದಬಡಗಾಮ್‌ನಲ್ಲಿ ಭಾರತೀಯ ವಾಯುಪಡೆಯ ಎಂಐ–17 ಹೆಲಿಕಾಪ್ಟರ್‌ ಪತನವಾಗಿ ಮೃತಪಟ್ಟಿದ್ದ ಯೋಧ ಸಿದ್ಧಾರ್ಥ ವಶಿಷ್ಟಅವರ ಅಂತ್ಯಕ್ರಿಯೆ ಸಕಲ ಮಿಲಿಟರಿ ಗೌರವಗಳೊಂದಿಗೆ ಶುಕ್ರವಾರ ನೆರವೇರಿತು.

ಕಳೆದ ಬುಧವಾರಇಲ್ಲಿಂದ 18 ಕಿ.ಮೀ. ದೂರದಲ್ಲಿರುವಬಡಗಾಮ್‌ನಲ್ಲಿ ಬೆಳಗ್ಗೆಎಂಐ–17 ಹೆಲಿಕಾಪ್ಟರ್‌ ಪತನವಾಗಿತ್ತು. ಈ ಅವಘಡದಲ್ಲಿಸಿದ್ಧಾರ್ಥ ವಶಿಷ್ಟ ಸೇರಿದಂತೆ 6 ಜನ ಯೋಧರು ಮೃತಪಟ್ಟಿದ್ದರು.

ವಾಯುಪಡೆಯ ವಿಶೇಷ ವಿಮಾನದ ಮೂಲಕ ಸಿದ್ಧಾರ್ಥ ವಶಿಷ್ಠ ಅವರ ಪಾರ್ಥಿವ ಶರೀರವನ್ನು ಗುರುವಾರವೇ ಚಂಡೀಗಢಕ್ಕೆ ತರಲಾಗಿತ್ತು. ಇಂದು ಬೆಳಗ್ಗೆಪಾರ್ಥಿವ ಶರೀರವನ್ನು ಅವರ ಕುಟುಂಬಸ್ಥರಿಗೆನೀಡಲಾಯಿತು.

ADVERTISEMENT

ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಮಿಲಿಟರಿ ಸಿಬ್ಬಂದಿಗಳುಸಕಲ ಮಿಲಿಟರಿ ಗೌರವ ಸಲ್ಲಿಸಿದರು. ಆ ಬಳಿಕ ಸಿದ್ಧಾರ್ಥ ಅವರ ಅಂತ್ಯಕ್ರಿಯೆಯನ್ನು ಧಾರ್ಮಿಕ ವಿಧಿವಿಧಾನಗಳ ಮೂಲಕ ನೆರವೇರಿಸಲಾಯಿತು. ಸಿದ್ದಾರ್ಥ ಅವರ ಪತ್ನಿ ಹಾಗೂ ತಂದೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಚಂಡೀಗಢದ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್‌ ಟಂಡಂನ್‌, ಹರಿಯಾಣ ಸಚಿವ ನಯಿಬ್‌ ಸೈನಿ ಸೇರಿದಂತೆಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.