ADVERTISEMENT

G20 Summit | ಗಣ್ಯರಿಗೆ ಭೂರಿಭೋಜನದ ಔತಣಕೂಟ 

ಪಿಟಿಐ
Published 8 ಸೆಪ್ಟೆಂಬರ್ 2023, 16:23 IST
Last Updated 8 ಸೆಪ್ಟೆಂಬರ್ 2023, 16:23 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಯಿಟರ್ಸ್ ಚಿತ್ರ

ನವದೆಹಲಿ: ಜಿ20 ಶೃಂಗಸಭೆ ನಡೆಯುವ ಭಾರತ್‌ ಮಂಟಪದಲ್ಲಿ ವಿಶ್ವದ ನಾಯಕರಿಗೆ ವಿಶೇಷವಾಗಿ ತಯಾರಿಸಿದ, ಮಳೆಗಾಲದ ಭಾರತೀಯ ಆಹಾರ ಖಾದ್ಯಗಳು, ವಿವಿಧ ಬಗೆಯ ಸಿಹಿ ಭಕ್ಷ್ಯಗಳನ್ನು ಉಣಬಡಿಸಲಾಗುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಆಯೋಜಿಸಿರುವ ಔತಣಕೂಟದಲ್ಲಿಯೂ ಅತಿಥಿ ಗಣ್ಯರಿಗೆ ಭೂರಿಭೋಜನ ವ್ಯವಸ್ಥೆ ಮಾಡಲಾಗಿದೆ.   

ADVERTISEMENT

‘ಶೃಂಗಸಭೆಯ ಔಪಚಾರಿಕ ಔತಣಕೂಟದಲ್ಲಿ ವಿಶೇಷವಾಗಿ ಈ ಸಂದರ್ಭಕ್ಕಾಗಿ ತಯಾರಿಸಿದ ಚಿನ್ನ, ಬೆಳ್ಳಿ ಲೇಪಿತ ಕಟ್ಲರಿಗಳಲ್ಲಿ ಆಹಾರ ಉಣ ಬಡಿಸಲಾಗುತ್ತದೆ. ಭಾರತದಲ್ಲಿ ಮಳೆಗಾಲದಲ್ಲಿ ಹೆಚ್ಚಾಗಿ ಸೇವಿಸುವ ಆಹಾರ ಭಕ್ಷ್ಯಗಳನ್ನು ಗಮನದಲ್ಲಿರಿಸಿಕೊಂಡು ವಿಶೇಷ ವಿಧಾನದಲ್ಲಿ ಆಹಾರ ಮೆನು ಸಿದ್ಧಪಡಿಸಿದ್ದೇವೆ. ಸಿರಿಧಾನ್ಯ ಆಧಾರಿತ ಭಕ್ಷ್ಯಗಳೂ ಈ ಮೆನುವಿನಲ್ಲಿ ಇರುತ್ತವೆ’ ಎಂದು ಮೂಲಗಳು ತಿಳಿಸಿದೆ.

ಶೃಂಗಸಭೆಯ ಮೊದಲ ದಿನದ ಕೊನೆಯಲ್ಲಿ ಭಾರತ ಮಂಟ‍ಪದಲ್ಲಿ ರಾಷ್ಟ್ರಪತಿ ಮುರ್ಮು ಅವರು ಗಣ್ಯರಿಗೆ ನೀಡಲಿರುವ ಭೂರಿ‌ಭೋಜನದ ಔತಣಕೂಟದಲ್ಲೂ ಬಾಯಿ ಚಪ್ಪರಿಸುವಂತೆ, ಎಂದೂ ಮರೆಯದಂತಹ ರುಚಿಕರ ಮತ್ತು ಆಹ್ಲಾದಕರವಾದ ಬಗೆಬಗೆಯ ಭಾರತೀಯ ಆಹಾರಗಳು ಇರಲಿವೆ. ಗುಲಾಬ್‌ ಜಾಮೂನ್‌, ರಸಮಲೈ, ಜಿಲೇಬಿಯಂತಹ ತರಹೇವಾರಿ ಸಿಹಿ ತಿನಿಸುಗಳನ್ನು ಬಡಿಸಲು ಯೋಜಿಸಲಾಗಿದೆ ಎಂದು ಅತಿಥಿ ಸತ್ಕಾರಕ್ಕೆ ನಿಯೋಜಿತವಾಗಿರುವ ಸಿಬ್ಬಂದಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.