G20 Summit : ಕಣ್ಮನ ಸೆಳೆಯುವಂತೆ ಸಿಂಗಾರಗೊಂಡ ಭಾರತ ಮಂಟಪ, ಚಿತ್ರಗಳಲ್ಲಿ ನೋಡಿ
ಪಿಟಿಐ
Published 7 ಸೆಪ್ಟೆಂಬರ್ 2023, 3:14 IST
Last Updated 7 ಸೆಪ್ಟೆಂಬರ್ 2023, 3:14 IST
ಇದೇ 9 ಮತ್ತು 10 ರಂದು ನಡೆಯಲಿರುವ ಜಿ 20 ಶೃಂಗಸಭೆಗೂ ಮುನ್ನ ಪ್ರಗತಿ ಮೈದಾನದಲ್ಲಿನ 'ಭಾರತ್ ಮಂಟಪ" ಸಿಂಗಾರಗೊಂಡಿರುವುದು
ಪಿಟಿಐ ಚಿತ್ರ
ಭಾರತ ಮಂಟಪದ ಎದುರು ನಟರಾಜ ಮೂರ್ತಿಯನ್ನು ನಿಲ್ಲಿಸಲಾಗಿದೆ. ಇದು 27 ಅಡಿ ಎತ್ತರ ಹೊಂದಿದ್ದು, ಸುಮಾರು 20 ಟನ್ ತೂಕವಿದೆ ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ADVERTISEMENT
ತಂಜಾವೂರಿನ ಸ್ವಾಮಿಮಲೈನ ಸಾಂಪ್ರದಾಯಿಕ ಸ್ಥಪತಿಗಳಿಂದ ‘ಲಾಸ್ಟ್-ವ್ಯಾಕ್ಸ್’ ಎರಕಹೊಯ್ದ' ವಿಧಾನವನ್ನು ಬಳಸಿಕೊಂಡು ನಟರಾಜ ಮೂರ್ತಿಯನ್ನು ಕೆತ್ತಲಾಗಿದೆ. ಇದನ್ನು ತಯಾರಿಸಲು ಸುಮಾರು 3.25 ಲಕ್ಷ ಮಾನವ ಗಂಟೆ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ
18ನೇ ಶೃಂಗಸಭೆಗಾಗಿ ₹2,700 ಕೋಟಿ ವೆಚ್ಚದಲ್ಲಿ ಭಾರತ ಮಟಂಪ ನಿರ್ಮಿಸಲಾಗಿದೆ
ಭಾರತ ಮಂಟಪದ ಎದುರು ಇರಿಸಲಾದ ಭೂಗೋಳ
ಎರಡು ದಿನಗಳ ಶೃಂಗಸಭೆಯಲ್ಲಿ 20 ಸದಸ್ಯ ರಾಷ್ಟ್ರಗಳು ಸೇರಿದಂತೆ 40 ದೇಶಗಳ ನಾಯಕರು ಮತ್ತು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಶಿವ ಮತ್ತು ಶಕ್ತಿ ಎರಡನ್ನೂ ಪ್ರತಿನಿಧಿಸುವ ಶಿವನ ತಾಂಡವ ಭಂಗಿಯನ್ನು ಪ್ರದರ್ಶಿಸುವ ವಿಗ್ರಹವನ್ನು ಕುಬ್ಜ ರಾಕ್ಷಸನ ಮೇಲೆ ಇರಿಸಲಾಗಿದೆ
ಈ ನಟರಾಜ ವಿಗ್ರಹವು ಎಂಟು ಲೋಹಗಳು ಅಥವಾ 'ಅಷ್ಟ ಧಾತು' ಅಂದರೆ ತಾಮ್ರ, ಸತು, ಸೀಸ, ತವರ, ಬೆಳ್ಳಿ, ಚಿನ್ನ, ಪಾದರಸ ಮತ್ತು ಕಬ್ಬಿಣದಿಂದ ಮಾಡಲ್ಪಟ್ಟಿದೆ.