ADVERTISEMENT

ಭಾರತದ ಅಧ್ಯಕ್ಷತೆಯಲ್ಲಿ ನವೆಂಬರ್‌ 22ರಂದು ಜಿ–20 ನಾಯಕರ ವರ್ಚುವಲ್‌ ಸಭೆ

ಪಿಟಿಐ
Published 7 ನವೆಂಬರ್ 2023, 15:30 IST
Last Updated 7 ನವೆಂಬರ್ 2023, 15:30 IST
<div class="paragraphs"><p>ಜಿ–20 ಶೃಂಗಸಭೆ ಹಿನ್ನೆಲೆಯಲ್ಲಿ ದೆಹಲಿಯ ಖಾಸಗಿ ಹೋಟೆಲ್‌ ಮುಂಭಾಗದಲ್ಲಿ ಜಿ–20 ಲಾಂಛನ ಅಳವಡಿಸಲಾಗಿತ್ತು</p></div>

ಜಿ–20 ಶೃಂಗಸಭೆ ಹಿನ್ನೆಲೆಯಲ್ಲಿ ದೆಹಲಿಯ ಖಾಸಗಿ ಹೋಟೆಲ್‌ ಮುಂಭಾಗದಲ್ಲಿ ಜಿ–20 ಲಾಂಛನ ಅಳವಡಿಸಲಾಗಿತ್ತು

   

––ಪಿಟಿಐ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇದೇ 22 ರಂದು ಜಿ–20  ವರ್ಚುವಲ್‌ ಸಭೆ ನಡೆಯಲಿದೆ, ಈಗಾಗಲೇ ಜಿ 20 ನಾಯಕರಿಗೆ ಆಹ್ವಾನ ನೀಡಲಾಗಿದೆ.

ADVERTISEMENT

ರಷ್ಯಾ– ಉಕ್ರೇನ್‌ ಯುದ್ಧ, ಇಸ್ರೇಲ್‌– ಹಮಾಸ್‌ ಯುದ್ಧ ಮತ್ತು ಜಾಗತಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. 

ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಜಿ20 ಸಭೆಯಲ್ಲಿ, ಭಾರತದ ಅಧ್ಯಕ್ಷತೆ ಮುಗಿಯುವ ಮೊದಲು ನವೆಂಬರ್‌ನಲ್ಲಿ ವರ್ಚುವಲ್‌ ಸಭೆ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. 

ವರ್ಚುವಲ್‌ ಸಭೆಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಹವಾಮಾನ ಹಣಕಾಸು ಮತ್ತು ಶುದ್ಧ ಶಕ್ತಿಯ ಅಭಿವೃದ್ಧಿಯ ಬಗ್ಗೆ ಭಾರತ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.