ಶ್ರೀಹರಿಕೋಟ: ಮಾನವ ಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ನಡೆಯುವ ಸರಣಿ ಪರೀಕ್ಷೆಗಳ ಪೈಕಿ ಇಂದು (ಶನಿವಾರ, ಅಕ್ಟೋಬರ್ 21ರಂದು) ನಡೆಯಲಿರುವ ಮೊದಲ ಪರೀಕ್ಷಾ ಉಡಾವಣೆ ಸಮಯವನ್ನು ಕೊನೆ ಕ್ಷಣದಲ್ಲಿ 30 ನಿಮಿಷ ಮುಂದೂಡಲಾಗಿದೆ.
ಪರೀಕ್ಷಾ ವಾಹನ ಡಿ1 ಮಿಷನ್ (ಡೆವಲಪ್‌ಮೆಂಟ್ ಫ್ಲೈಟ್ ಮಿಷನ್–1) ಉಡಾವಣೆಯನ್ನು ಬೆಳಿಗ್ಗೆ 8ಕ್ಕೆ ನಿಗದಿಯಾಗಿತ್ತು.
'ಉಡಾವಣೆ ಸಮಯವನ್ನು ಬೆಳಿಗ್ಗೆ 8.30ಕ್ಕೆ ಮರುನಿಗದಿಪಡಿಸಲಾಗಿದೆ' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ.
ಸಮಯ ಬದಲಾವಣೆಗೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಮಳೆ ಅಥವಾ ಮೋಡ ಕವಿದ ವಾತಾವರಣ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.