ADVERTISEMENT

ಲಂಚ ಪ್ರಕರಣ: ಸಿಬಿಐನಿಂದ ಭಾರತೀಯ ಅನಿಲ ಪ್ರಾಧಿಕಾರದ ನಿರ್ದೇಶಕ ಬಂಧನ

ಪಿಟಿಐ
Published 16 ಜನವರಿ 2022, 11:37 IST
Last Updated 16 ಜನವರಿ 2022, 11:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ₹ 50 ಲಕ್ಷಕ್ಕೂ ಹೆಚ್ಚು ಲಂಚ ಪಡೆದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕ ವಲಯ ಉದ್ದಿಮೆ ಭಾರತೀಯ ಅನಿಲ ಪ್ರಾಧಿಕಾರದ (ಗೇಲ್) ನಿರ್ದೇಶಕ (ಮಾರುಕಟ್ಟೆ) ಇ.ಎಸ್‌.ರಂಗನಾಥನ್‌ ಅವರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಗೇಲ್‌ ಮಾರಾಟ ಮಾಡುವ ಪೆಟ್ರೊ ಕೆಮಿಕಲ್‌ ಉತ್ನನ್ನಗಳನ್ನು ಖರೀದಿಸುವ ಖಾಸಗಿ ಕಂಪನಿಗಳಿಗೆ ರಿಯಾಯಿತಿ ಕೊಡುವುದಕ್ಕಾಗಿ ಅವರು ಲಂಚ ಪಡೆದಿದ್ದರು ಎಂದು ಆರೋಪಿಸಲಾಗಿದೆ.

ಈ ಲಂಚದ ಹಗರಣವನ್ನು ಭೇದಿಸಿದ ಸಿಬಿಐ ಅಧಿಕಾರಿಗಳು, ರಂಗನಾಥನ್‌ ಹಾಗೂ ಮಧ್ಯವರ್ತಿಗಳು ಮತ್ತು ವರ್ತಕರು ಸೇರಿ ಐವರನ್ನು ಶನಿವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ರಂಗನಾಥನ್‌ ಅವರ ಕಚೇರಿ ಹಾಗೂ ನಿವಾಸ ಸೇರಿದಂತೆ ಎಂಟು ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ಕೈಗೊಂಡಿದ್ದರು. ₹ 1.29 ಕೋಟಿ ನಗದು, ಚಿನ್ನಾಭರಣಗಳುಸೇರಿ ₹ 1.25 ಕೋಟಿ ಮೌಲ್ಯದ ವಸ್ತುಗಳನ್ನು ಈ ಶೋಧ ಕಾರ್ಯದ ವೇಳೆ ವಶಪಡಿಸಿಕೊಳ್ಳಲಾಗಿದೆ’ ಎಂದು ಸಿಬಿಐ ವಕ್ತಾರ ಆರ್‌.ಸಿ.ಜೋಶಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.