ಚೆನ್ನೈ: ಗಾಜಾಚಂಡಮಾರುತವು ತಮಿಳುನಾಡಿನ ಪಂಬನ್ ಹಾಗೂ ಕಡಲೂರು ನಗರಗಳ ನಡುವಣ ಪ್ರದೇಶ ಹಾಗೂಪುದುಚೇರಿಯ ಕೆಲವೆಡೆಭೂಕುಸಿತಕ್ಕೆ ಕಾರಣವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಸದ್ಯ ತುರ್ತು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.ತಮಿಳುನಾಡಿನ ನಾಗಪಟ್ಟಣಂ, ತಿರುವರೂರ್, ತಂಜಾವೂರ್, ಕಡಲೂರು ಜಿಲ್ಲೆಗಳು ಹಾಗೂ ಪುದುಚೇರಿ ಪ್ರಾಂತ್ಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಪರೀಕ್ಷಾ ಚಟುವಟಿಕೆಗಳನ್ನು ಮುಂದೂಡಲಾಗಿದೆ.
ಜನರು ನೆರವಿಗಾಗಿ1070, 1077 ಅಥವಾ 1031 ಸಂಖ್ಯೆಗಳನ್ನು ಸಂಪರ್ಕಿಸಬಹುದು.
ವಿದ್ಯುತ್ ಕಡಿತದ ಸಂದರ್ಭದಲ್ಲಿಯೂ ನಿರಂತರವಾಗಿ ಮೊಬೈಲ್ ಸಂಪರ್ಕವನ್ನು ಮುಂದುವರಿಸಲು ಐದು ದಿನಗಳವರೆಗೆ ಜನರೇಟರ್‌ಗಳಿಗೆ ಬೇಕಾಗುವ ಇಂಧನವನ್ನು ಟೆಲಿಕಾಂ ಸಂಸ್ಥೆಗಳು ಈಗಾಗಲೇ ಸಂಗ್ರಹಿಸಿಕೊಂಡಿವೆ. ತುರ್ತು ನಿಯಂತ್ರಣ ಕೊಠಡಿಯಿಂದಎಸ್ಎಂಎಸ್‌ಗಳ ಮೂಲಕ ಹವಾಮಾನ ಮುನ್ಸೂಚನೆ ಸಂದೇಶಗಳೂ ರವಾನೆಯಾಗುತ್ತದೆ.
ಕರಾವಳಿ ಪ್ರದೇಶದಲ್ಲಿ ತಗ್ಗು ಪ್ರದೇಶದಲ್ಲಿರುವಸುಮಾರು 212 ಪ್ರದೇಶಗಳನ್ನು ಗುರುತಿಸಲಾಗಿದ್ದು, ಅವರಿಗಾಗಿ ಸದ್ಯ 249 ಆಶ್ರಯ ತಾಣಗಳನ್ನು ನಿರ್ಮಿಸಲಾಗಿದೆ. ತುರ್ತು ರಕ್ಷಣಾ ಕಾರ್ಯಾಚರಣೆಗಾಗಿ ಈಗಾಗಲೇ 135 ತಂಡಗಳನ್ನು ರಚಿಸಲಾಗಿದ್ದು, 633 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.