ನವದೆಹಲಿ: ಮಾಜಿ ಬಿಜೆಪಿ ವಕ್ತಾರೆ ನೂಪರ್ ಶರ್ಮಾ ಅವರಿಗೆ ಒಡ್ಡಲಾಗಿರುವ ಬೆದರಿಕೆಗಳ ಬಗ್ಗೆ ಜಾತ್ಯತೀತಉದಾರವಾದಿಗಳು ಮೌನವಾಗಿದ್ದಾರೆ ಎಂದು ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಿವಿ ಸಂವಾದವೊಂದರಲ್ಲಿ ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿ ನೂಪರ್ ಶರ್ಮಾ ಅವರಿಗೆ ಕೊಲೆ ಬೆದರಿಕೆಗಳು ಕೇಳಿಬಂದಿರುವ ಹಿನ್ನೆಲೆ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.
'ಈಗಾಗಲೇ ಕ್ಷಮೆ ಕೇಳಿರುವ ಓರ್ವ ಮಹಿಳೆ ವಿರುದ್ಧ ರಾಷ್ಟ್ರದಾದ್ಯಂತ ಕೊಲೆ ಬೆದರಿಕೆಗಳು ಮತ್ತು ದ್ವೇಷ ಕಾರುವ ಸಂದೇಶಗಳು ವ್ಯಕ್ತವಾಗುತ್ತಿದ್ದರೂ ಜಾತ್ಯತೀತಉದಾರವಾದಿಗಳು ಎಂದು ಹೇಳಿಕೊಳ್ಳುವವರು ಮೌನವಾಗಿದ್ದಾರೆ. ಇದು ನಿಜಕ್ಕೂ ಕಿವುಡುತನ' ಎಂದು ಗಂಭೀರ್ ಹೇಳಿದ್ದಾರೆ.
ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್ ಇತ್ತೀಚೆಗೆ ನೂಪುರ್ ಶರ್ಮಾ ಅವರನ್ನು ಗಲ್ಲಿಗೇರಿಸಬೇಕು ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.