ADVERTISEMENT

ಜಾತ್ಯತೀತ ತತ್ವದ ಪರ ನಿಂತಿದ್ದಕ್ಕೆ ಕೋಮುವಾದಿಗಳಿಂದ ಗಾಂಧಿಯ ಕೊಲೆ: ಯೆಚೂರಿ

ಪಿಟಿಐ
Published 30 ಜನವರಿ 2024, 16:20 IST
Last Updated 30 ಜನವರಿ 2024, 16:20 IST
ಸೀತಾರಾಂ ಯೆಚೂರಿ
ಸೀತಾರಾಂ ಯೆಚೂರಿ   

ನವದೆಹಲಿ: ಭಾರತದ ಒಗ್ಗಟ್ಟು ಮತ್ತು ಜಾತ್ಯತೀತ ತತ್ವದ ಪರವಾಗಿ ನಿಂತಿದ್ದಕ್ಕೆ ಮಹಾತ್ಮ ಗಾಂಧಿಯವರನ್ನು ಕೊಲೆ ಮಾಡಲಾಯಿತು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮಂಗಳವಾರ ಹೇಳಿದ್ದಾರೆ.

ಎಲ್ಲರನ್ನೂ ಒಳಗೊಳ್ಳುವ ಭಾರತದ ದೃಷ್ಟಿಯನ್ನು ಎತ್ತಿ ಹಿಡಿಯುವುದು ಪ್ರತಿಯೊಬ್ಬ ದೇಶಭಕ್ತನ ಕರ್ತವ್ಯ ಎಂದು ಅವರು ಹೇಳಿದ್ದಾರೆ.

‘ಮಹಾತ್ಮ ಗಾಂಧಿ ಹುತಾತ್ಮರಾದ ಈ ದಿನದಂದು, ಘೋರ ಆಕ್ರಮಣಕ್ಕೆ ಒಳಗಾಗುತ್ತಿರುವ ಎಲ್ಲರನ್ನೂ ಒಳಗೊಳ್ಳುವ ಭಾರತದ ದೃಷ್ಟಿಯನ್ನು ಎತ್ತಿಹಿಡಿಯುವುದು ಮತ್ತು ಬಲಪಡಿಸುವುದು ಎಲ್ಲಾ ಭಾರತೀಯ ದೇಶಭಕ್ತರ ಕರ್ತವ್ಯವಾಗಿದೆ. ದೇಶದ ಒಗ್ಗಟ್ಟು ಹಾಗೂ ಜಾತ್ಯತೀತ ತತ್ವದ ಪರವಾಗಿ ನಿಂತಿದ್ದಕ್ಕೆ ಕೋಮುವಾದಿ ಶಕ್ತಿಗಳು ಮಹಾತ್ಮ ಗಾಂಧಿಯವರನ್ನು ಕೊಲೆ ಮಾಡಿದವು’ ಎಂದು ಅವರು ‘ಎಕ್ಸ್‌‘ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.