ADVERTISEMENT

ಗೇ ಡೇಟಿಂಗ್ ಆ್ಯಪ್‌ ಮೂಲಕ ಯುವಕರನ್ನು ವಂಚಿಸುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ

ಗೇ ಡೇಟಿಂಗ್ ಆ್ಯಪ್ ಮೂಲಕ ಯುವಕರನ್ನು ಸೆಳೆದು ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಉತ್ತರ ಪ್ರದೇಶದ ಕಾನ್ಪುರ ಪೊಲೀಸರು ಬಂಧಿಸಿದ್ದಾರೆ.

ಪಿಟಿಐ
Published 9 ಆಗಸ್ಟ್ 2023, 2:55 IST
Last Updated 9 ಆಗಸ್ಟ್ 2023, 2:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾನ್ಪುರ: ಗೇ ಡೇಟಿಂಗ್ ಆ್ಯಪ್ ಮೂಲಕ ಯುವಕರನ್ನು ಸೆಳೆದು ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಉತ್ತರ ಪ್ರದೇಶದ ಕಾನ್ಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ದಿಲೀಪ್ ಸಿಂಗ್ (21) ಅರುಣ್ ರಜಪೂತ್ (22) ವಿಪಿನ್ ಸಿಂಗ್ (21) ಪವನ್ ಕುಮಾರ್ ಸಿಂಗ್ (22), ಪ್ರವೀಣ್ ಸಿಂಗ್ (20), ಬ್ರಿಜೇಂದ್ರ ಸಿಂಗ್ (19) ಎಂದು ಗುರುತಿಸಲಾಗಿದೆ.

ಆರೋಪಿತರು Blued ಎಂಬ ಗೇ ಡೇಟಿಂಗ್ ಆ್ಯಪ್‌ನಲ್ಲಿ ನಕಲಿ ಪ್ರೊಫೈಲ್‌ಗಳನ್ನು ರಚಿಸಿ ಯುವಕರನ್ನು ನಂಬಿಸುತ್ತಿದ್ದರು. ಬಳಿಕ ನಂಬಿಕೆ ಸಂಪಾದಿಸಿ, ಸಂತ್ರಸ್ತ ಯುವಕರ ಬೆತ್ತಲೆ ಫೋಟೊ– ವಿಡಿಯೊಗಳನ್ನು ಪಡೆಯುತ್ತಿದ್ದರು. ನಂತರ ಹಣಕ್ಕೆ ಹಾಗೂ ಇತರ ಲೈಂಗಿಕ ಆಸೆಗಳಿಗೆ ಬೇಡಿಕೆ ಇಟ್ಟು ಅವರಿಗೆ ಕಿರುಕುಳ ಕೊಡುತ್ತಿದ್ದರು ಎಂದು ಕಾನ್ಪುರ್ ಡಿಸಿಪಿ ಲಖನ್ ಸಿಂಗ್ ತಿಳಿಸಿದ್ದಾರೆ.

ADVERTISEMENT

ಕಲ್ಯಾಣಪುರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಒಬ್ಬ ಯುವಕ ದೂರು ನೀಡಿದ್ದರಿಂದ ದಿಲೀಪ್ ಸಿಂಗ್ ಗ್ಯಾಂಗ್‌ ಅನ್ನು ಬಂಧಿಸಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.

ಬಂಧಿತರಿಂದ ಲ್ಯಾಪ್‌ಟಾಪ್, ಮೊಬೈಲ್‌ಗಳು, ಎಟಿಎಂ ಕಾರ್ಡುಗಳು ಹಾಗೂ ಪೊಲೀಸ್ ಸಮವಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲಖನ್ ಸಿಂಗ್ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.